28-09-2023
ಕೊಹ್ಲಿ ರೆಕಾರ್ಡ್: ಪಾಂಟಿಂಗ್ ದಾಖಲೆ ಪುಡಿ ಪುಡಿ
ಕೊಹ್ಲಿ ಸಾಧನೆ
ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
56 ರನ್
ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು.
ಅತ್ಯಧಿಕ 50+ ಸ್ಕೋರ್
ಈ 56 ರನ್ಗಳೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಪಾಂಟಿಂಗ್ ದಾಖಲೆ ಉಡೀಸ್
ಇದಕ್ಕೂ ಮುನ್ನ 3ನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ ಇದ್ದರು. ಇವರು 365 ಇನಿಂಗ್ಸ್ಗಳಲ್ಲಿ ಒಟ್ಟು 112 ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ್ದರು.
ಕೊಹ್ಲಿ 269 ಇನಿಂಗ್ಸ್
ಕಿಂಗ್ ಕೊಹ್ಲಿ ಕೇವಲ 269 ಇನಿಂಗ್ಸ್ಗಳಲ್ಲಿ 113 ಬಾರಿ 50+ ಸ್ಕೋರ್ ಗಳಿಸಿದ್ದಾರೆ. ಈ ಮೂಲಕ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
ಸಚಿನ್ ಅಗ್ರಸ್ಥಾನ
ಸದ್ಯ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಇವರು 452 ಇನಿಂಗ್ಸ್ಗಳಲ್ಲಿ ಒಟ್ಟು 145 ಬಾರಿ 50+ ಸ್ಕೋರ್ಗಳಿಸಿದ್ದಾರೆ.
ಸಂಗಾಕ್ಕರ 2ನೇ ಸ್ಥಾನ
ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಾಕ್ಕರ 380 ಇನಿಂಗ್ಸ್ಗಳಲ್ಲಿ ಒಟ್ಟು 118 ಬಾರಿ 50+ ಸ್ಕೋರ್ ಗಳಿಸಿದ್ದಾರೆ.
ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡಗಳಲ್ಲಿ ಭಾರತವೇ ನಂ.1..!
ಇನ್ನಷ್ಟು ಓದಿ