ಮೊದಲ ಏಕದಿನ: ಇಲ್ಲಿದೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

22 September 2023

Pic credit - Google

ಇಂದು ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.

ಮೊದಲ ಏಕದಿನ

Pic credit - Google

ಮೊದಲ ಎರಡು ಏಕದಿನ ಪಂದ್ಯದಿಂದ ಕೊಹ್ಲಿ, ರೋಹಿತ್ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ರಾಹುಲ್ ನಾಯಕನಾಗಿದ್ದಾರೆ.

ಹಿರಿಯರಿಗೆ ವಿಶ್ರಾಂತಿ

Pic credit - Google

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಹೇಗಿರಬಹುದು ಎಂಬುದನ್ನು ನೋಡೋಣ.

ಪ್ಲೇಯಿಂಗ್ XI

Pic credit - Google

ಭಾರತ ಪರ ಓಪನರ್​ಗಳಾಗಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶುಭ್​ಮನ್ ಗಿಲ್ ಜೊತೆ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ.

ಕಿಶನ್-ಗಿಲ್

Pic credit - Google

ಮೂರನೇ ಕ್ರಮಾಂಕದಲ್ಲಿ ರುತುರಾಜ್ ಗಾಯಕ್ವಾಡ್ ಆಡಿದರೆ 4ನೇ ಸ್ಥಾನದಲ್ಲಿ ಇಂಜುರಿಯಿಂದ ಗುಣಮುಖರಾಗಿರುವ ಶ್ರೇಯಸ್ ಅಯ್ಯರ್ ಆಡಬಹುದು.

ರುತುರಾಜ್-ಅಯ್ಯರ್

Pic credit - Google

ಐದು ಮತ್ತು ಆರನೇ ಕ್ರಮಾಂಕದಲ್ಲಿ ಕ್ರಮವಾಗಿ ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಬಹುದು.

ರಾಹುಲ್-ಸೂರ್ಯ

Pic credit - Google

ಆಲ್ರೌಂಡರ್ ಜವಾಬ್ದಾರಿ ರವೀಂದ್ರ ಜಡೇಜಾ ಹೊರಲಿದ್ದಾರೆ. ಇವರ ಜೊತೆಗೆ ರವಿಚಂದ್ರನ್ ಅಶ್ವಿನ್ ಕೂಡ ಆಡುವುದು ಖಚಿತವಾಗಿದೆ.

ಆಲ್ರೌಂಡರ್

Pic credit - Google

ಮೂವರು ವೇಗಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಳ್ಳಬಹುದು.

ವೇಗಿಗಳು

Pic credit - Google

ಇಂದು ಭಾರತ-ಆಸ್ಟ್ರೇಲಿಯಾ ಪ್ರಥಮ ಏಕದಿನ