22-09-2023

ಇಂದು ಭಾರತ-ಆಸ್ಟ್ರೇಲಿಯಾ ಪ್ರಥಮ ಏಕದಿನ

ಭಾರತ-ಆಸೀಸ್

ಭಾರತ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಚಾಲನೆ ಸಿಗಲಿದೆ.

ಮೊದಲ ಪಂದ್ಯ

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಇಂದು ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ.

ಎಷ್ಟು ಗಂಟೆಗೆ?

ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದ್ದು, 1:30ಕ್ಕೆ ಪಂದ್ಯ ಶುರುವಾಗಲಿದೆ.

ನೇರಪ್ರಸಾರ?

ಮೊದಲ ಏಕದಿನ ಪಂದ್ಯ ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. JioCinema ದಲ್ಲಿ ಉಚಿತವಾಗಿ ವೀಕ್ಷಿಸಬಹುದು.

ವಿಶ್ರಾಂತಿ

ಮೊದಲ ಎರಡು ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲವರಿಗೆ ವಿಶ್ರಾಂತಿ ನೀಡಲಾಗಿದೆ.

ರಾಹುಲ್ ನಾಯಕ

ಭಾರತದ ಖಾಯಂ ನಾಯಕ ರೋಹಿತ್​ಗೆ ವಿಶ್ರಾಂತಿ ನೀಡಿದ ಕಾರಣ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಮೊಹಾಲಿ ಪಿಚ್:

ಮೊಹಾಲಿ ಪಿಚ್ ಹೆಚ್ಚು ಹಸಿರಿನಿಂದ ಕೂಡಿದೆ. ಇಲ್ಲಿನ ಬೌನ್ಸ್ ವೇಗಿಗಳಿಗೆ ನೆರವಾಗುವ ಸಾಧ್ಯತೆಯಿದೆ. ಟಾಸ್ ಗೆದ್ದ ನಾಯಕ ಬೌಲ್ ಅನ್ನು ಆಯ್ಕೆ ಮಾಡುವುದು ಉತ್ತಮ ಆಯ್ಕೆ.

ಕೌಂಟಿ ಚಾಂಪಿಯನ್ಶಿಪ್​ನಲ್ಲಿ ಉಮೇಶ್ ಯಾದವ್ ಸ್ಫೋಟಕ ಬ್ಯಾಟಿಂಗ್