IND vs PAK: ಕೊಲಂಬೊದಲ್ಲಿ ಈಗ ಹವಾಮಾನ ಹೇಗಿದೆ?

11 September 2023

Pic credit - Google

ಇಂದು ಏಷ್ಯಾಕಪ್​ನಲ್ಲಿ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮೀಸಲು ದಿನದಾಟ ನಡೆಯಲಿದೆ.

ಮೀಸಲು ದಿನದಾಟ

Pic credit - Google

ಭಾನುವಾರ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 24.1 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಬಳಿಕ ಶುರುವಾದ ಮಳೆ ನಿಲ್ಲದ ಕಾರಣ ಸೋಮವಾರಕ್ಕೆ ಮುಂಡೂಡಲಾಯಿತು.

ಭಾನುವಾರ ಮಳೆ

Pic credit - Google

ಹವಾಮಾನ ವರದಿಯ ಪ್ರಕಾರ ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಕೊಲಂಬೊದಲ್ಲಿ ಬೆಳಗ್ಗಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ.

ಇಂದುಕೂಡ ಮಳೆ

Pic credit - Google

ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. ಈ ಹೊತ್ತಿಗೆ 99 ಪ್ರತಿಶತದಷ್ಟು ಮೋಡ ಕವಿದ ವಾತಾವರಣ ಇರಲಿದೆ. ತೇವಾಂಶವು ಶೇಕಡಾ 81 ರಷ್ಟಿರುತ್ತದಂತೆ.

3 ಗಂಟೆಗೆ ಪಂದ್ಯ

Pic credit - Google

ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 17.9ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಸಂಜೆ ವೇಳೆಗೆ ಶೇ. 80 ರಷ್ಟು ಮಳೆಯಾಗಲಿದೆ. ನಂತರ ಶೇ. 100 ರಷ್ಟು ಮೋಡ ಕವಿದಿರುತ್ತದೆ.

ಶೇ. 80 ರಷ್ಟು ಮಳೆ

Pic credit - Google

ಆಗಸ್ಟ್-ಸೆಪ್ಟೆಂಬರ್​ನಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಈ ತಿಂಗಳುಗಳಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಯಾವುದೇ ಪಂದ್ಯ ಆಯೋಜಿಸುವುದಿಲ್ಲ.

ಲಂಕಾದಲ್ಲಿ ಮಳೆಗಾಲ

Pic credit - Google

ಭಾರತ-ಪಾಕಿಸ್ತಾನ ನಡುವಣ ಇಂದಿನ ಮೀಸಲು ದಿನದ ಪಂದ್ಯ ಕೂಡ ಮಳೆಯಿಂದ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಪಡೆಯಲಿವೆ.

ಪಂದ್ಯ ರದ್ದಾದರೆ?

Pic credit - Google

ಏಷ್ಯಾಕಪ್'ನಲ್ಲಿ ನಾಳೆಯೇ ಭಾರತದ ಮುಂದಿನ ಪಂದ್ಯ: ಯಾರ ವಿರುದ್ಧ?