Paris Olympics 2024: ಹಾಕಿಯಲ್ಲಿ ಭಾರತ ಎಷ್ಟು ಒಲಿಂಪಿಕ್ಸ್ ಪದಕ ಗೆದ್ದಿದೆ ಗೊತ್ತಾ?

08  August 2024

Pic credit: Google

ಪೃಥ್ವಿ ಶಂಕರ

Pic credit: Google

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Pic credit: Google

ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ 13ನೇ ಪದಕವಾಗಿದ್ದು, ನಾಲ್ಕನೇ ಬಾರಿ ಕಂಚಿನ ಪದಕ ಜಯಿಸಿದೆ.

Pic credit: Google

ಭಾರತವು ಹಾಕಿಯಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ದೇಶವಾಗಿದ್ದು, 8 ಬಾರಿ ಚಿನ್ನದ ಪದಕ ಮತ್ತು ಒಂದು ಬಾರಿ ಬೆಳ್ಳಿ ಪದಕ ಗೆದ್ದಿದೆ.

Pic credit: Google

1928ರ ಒಲಿಂಪಿಕ್ಸ್‌ನಿಂದ ಭಾರತ ಹಾಕಿಯಲ್ಲಿ ಭಾಗವಹಿಸುತ್ತಿದೆ. ಈ ಅವಧಿಯಲ್ಲಿ ಭಾರತ ಹಾಕಿ ತಂಡ ತನ್ನ ಮೊದಲ 6 ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು.

Pic credit: Google

ಭಾರತವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ಮಾತ್ರ ಹಾಕಿಯಲ್ಲಿ 10 ಪದಕಗಳನ್ನು ಗೆದ್ದ ಸಾಧನೆ ಮಾಡಿದೆಯಾದರೂ, ಕೇವಲ 1 ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Pic credit: Google

ನೆದರ್ಲ್ಯಾಂಡ್ಸ್ ಮತ್ತು ಗ್ರೇಟ್ ಬ್ರಿಟನ್ ಇದುವರೆಗೆ 9 ಒಲಿಂಪಿಕ್ ಪದಕಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೂಡ ಹಾಕಿಯಲ್ಲಿ 8 ಪದಕಗಳನ್ನು ಗೆದ್ದಿದೆ.