ಐಫೋನ್ 15 ಸರಣಿ ಬಿಡುಗಡೆಗೂ ಮುನ್ನ ಶಾಕ್ ಕೊಟ್ಟ ಕಂಪನಿ

12 September 2023

Pic credit - Google

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಆ್ಯಪಲ್ ಐಫೋನ್ 15 ಸರಣಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲಿದೆ.

ಇಂದು 15 ಸರಣಿ ರಿಲೀಸ್

Pic credit - Google

ಐಫೋನ್ 15 ಸರಣಿ ಬಿಡುಗಡೆಗೆ ಕೆಲವೇ ಗಂಟೆಗಳಿರುವಾಗ ಆ್ಯಪಲ್ ಕಂಪನಿ ಆಘಾತಕಾರಿ ಸುದ್ದಿಯೊಂದನ್ನು ಹೇಳಿದೆ.

ಶಾಕ್ ಕೊಟ್ಟ ಕಂಪನಿ

Pic credit - Google

ಐಫೋನ್ 15 ಸರಣಿಯ ಬಿಡುಗಡೆಯ ಜೊತೆಗೆ ಆ್ಯಪಲ್ ಅಧಿಕೃತವಾಗಿ ಐಫೋನ್ 13 ಮಿನಿ ಸ್ಥಗಿತಗೊಳಿಸಲಿದೆ. ಇನ್ಮುಂದೆ ಯಾವುದೇ ಮಿನಿ ಐಫೋನ್ ಸಿಗುವುದಿಲ್ಲ.

ಐಫೋನ್ 13 ಮಿನಿ ಸ್ಥಗಿತ

Pic credit - Google

ಆ್ಯಪಲ್ 2020 ರಲ್ಲಿ ಮೊದಲಿಗೆ ಐಫೋನ್ 12 ಮಿನಿ ಬಿಡುಗಡೆ ಮಾಡಿತ್ತು. ಅದರ ಮುಂದಿನ ವರ್ಷವೇ ಐಫೋನ್ 13 ಮಿನಿ ಅನ್ನು ಬಿಡುಗಡೆ ಮಾಡಿತ್ತು.

ಐಫೋನ್ 12, 13 ಮಿನಿ

Pic credit - Google

ಇನ್ನುಂದೆ ಐಫೋನ್ ಸರಣಿಯಲ್ಲಿ ಮಿನಿ ಆವೃತ್ತಿ ಇರುವುದಿಲ್ಲ. ಬದಲಾಗಿ ನವೀಕರಣಗೊಂಡ ಐಫೋನ್ ಪ್ಲಸ್ ಆವೃತ್ತಿಯಲ್ಲಿ ಬಿಡುಗಡೆ ಆಗಲಿದೆ.

ಮಿನಿ ಬದಲು ಪ್ಲಸ್

Pic credit - Google

ಕಳೆದ ವರ್ಷ ಐಫೋನ್‌ ಮಿನಿ ಮಾಡೆಲ್‌ಗೆ ಬದಲಾಗಿ ಐಫೋನ್ 14 ಪ್ಲಸ್ ಪರಿಚಯಿಸಿತ್ತು. ಈ ವರ್ಷ ಶಾಶ್ವತವಾಗಿ ಮಿನಿಯನ್ನು ಸ್ಥಗಿತಗೊಳಿಸುವುದಕ್ಕೆ ಆ್ಯಪಲ್‌ ಮುಂದಾಗಿದೆ.

14ನಲ್ಲೂ ಇರಲಿಲ್ಲ

Pic credit - Google

ಭಾರತದಲ್ಲಿ ಇಂದು ರಾತ್ರಿ 10:30ಕ್ಕೆ ಪ್ರಾರಂಭವಾಗಲಿರುವ ಆ್ಯಪಲ್​ನ ವಂಡರ್‌ಲಸ್ಟ್ ಸಮಾರಂಭದಲ್ಲಿ ಬಹುನಿರೀಕ್ಷಿತ ಐಫೋನ್ 15 ಸರಣಿ ಬಿಡುಗಡೆ ಆಗಲಿದೆ.

ವಂಡರ್‌ಲಸ್ಟ್ ಈವೆಂಟ್

Pic credit - Google

ಭಾರತದಲ್ಲಿ ಐಫೋನ್ 15 ಸರಣಿ ಎಷ್ಟು ಗಂಟೆಗೆ ಲಾಂಚ್?