ಏಷ್ಯನ್ ಗೇಮ್ಸ್ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ದಿವ್ಯಾಂಶ್ ಸಿಂಗ್ ಪವಾರ್ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.
25 September 2023
ಏಷ್ಯನ್ ಗೇಮ್ಸ್ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದು, ಶೂಟಿಂಗ್ನಲ್ಲಿ ಭಾರತಕ್ಕೆ ಈ ಚಿನ್ನದ ಪದಕ ಲಭಿಸಿದೆ.
ವೈಯಕ್ತಿಕವಾಗಿ 629.6 ಅಂಕ ಸಂಪಾದಿಸಿದ ದಿವ್ಯಾಂಶ್ ಸಿಂಗ್ ಪವಾರ್ ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಜೈಪುರ ಮೂಲದ 21 ವರ್ಷದ ದಿವ್ಯಾಂಶ್, 2014 ರಲ್ಲಿ ಅಂದರೆ 12 ನೇ ವಯಸ್ಸಿನಲ್ಲಿ ಶೂಟಿಂಗ್ ಅಭ್ಯಾಸ ಆರಂಭಿಸಿದರು.
ಆದರೆ ಈ ನಡುವೆ ಆನ್ಲೈನ್ ಗೇಮ್ ಪಬ್ಜಿ ಆಟದ ಚಟಕ್ಕೆ ಬಿದ್ದಿದ್ದ ದಿವ್ಯಾಂಶ್ರನ್ನು ಕಂಡು ಇಡೀ ಕುಟುಂಬವೇ ಆತಂಕಕ್ಕೆ ಒಳಗಾಗಿತ್ತು.
ಮಗನಿಂದ ಈ ಚಟವನ್ನು ದೂರ ಮಾಡುವ ಸಲುವಾಗಿ ದಿವ್ಯಾಂಶ್ ಅವರ ತಂದೆ ದಿವ್ಯಾಂಶ್ ಅವರನ್ನು ದೆಹಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ಗೆ ಸೇರಿಸಿದರು.
ಕ್ರಮೇಣ ಪಬ್ಜಿ ಆಟದ ಚಟದಿಂದ ಹೊರಬಂದ ದಿವ್ಯಾಂಶ್, 2019 ರ ಬೀಜಿಂಗ್ ವಿಶ್ವಕಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು.
ಬಳಿಕ ಪುತಿಯಾನ್‌ನಲ್ಲಿ ನಡೆದ 2019 ರ ವಿಶ್ವಕಪ್ ಫೈನಲ್‌ನಲ್ಲಿ, ದಿವ್ಯಾಂಶ್ ವೈಯಕ್ತಿಕ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.
2022 ರಲ್ಲಿ ಕೈರೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಈವೆಂಟ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆಲ್ಲುವಲ್ಲಿ ದಿವ್ಯಾಂಶ್ ಪ್ರಮುಖ ಪಾತ್ರವಹಿಸಿದ್ದರು.