ಭಾವಿ ಪತಿಯೊಟ್ಟಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾನ್ಹವಿ ಕಪೂರ್

13 AUG 2024

 Manjunatha

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಭಾವಿ ಪತಿಯೊಟ್ಟಿಗೆ ತಿರುಪತಿಗೆ ಆಗಮಿಸಿದ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

  ಬೆಡಗಿ ಜಾನ್ಹವಿ ಕಪೂರ್

ನಟಿ ಜಾನ್ಹವಿ ಕಪೂರ್ ಹಾಗೂ ಬಾಯ್​ಫ್ರೆಂಡ್ ಶಿಖರ್ ಫಾರಿಯಾ ಒಟ್ಟಿಗೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

   ಬಾಯ್​ಫ್ರೆಂಡ್ ಶಿಖರ್ 

ಇಂದು ಜಾನ್ಹವಿಯ ತಾಯಿ ಶ್ರೀದೇವಿಯ ಪುಣ್ಯತಿಥಿ ಇರುವ ಕಾರಣ ಜಾನ್ಹವಿ ಇಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

   ಶ್ರೀದೇವಿಯ ಪುಣ್ಯತಿಥಿ

ಕಳೆದ ತಿಂಗಳು ಸಹ ಜಾನ್ಹವಿ ಕಪೂರ್, ಶಿಖರ್ ಫಾರಿಯಾ ಜೊತೆಗೆ ತಿರುಪತಿಗೆ ಆಗಮಿಸಿದ್ದರು. ಜೊತೆಗೆ ಓರಿ ಸಹ ಇದ್ದರು.

 ಕಳೆದ ತಿಂಗಳು ಸಹ ಭೇಟಿ

ಈ ಬಾರಿ ಜಾನ್ಹವಿ ಹಾಗೂ ಶಿಖರ್ ಮಾತ್ರವೇ ಬಂದಿದ್ದಾರೆ. ಜಾನ್ಹವಿ ಕಪೂರ್, ವೆಂಕಟೇಶ್ವರ ಸ್ವಾಮಿಯ ಮಹಾ ಭಕ್ತೆ.

 ವೆಂಕಟೇಶ್ವರ ಸ್ವಾಮಿ ಭಕ್ತೆ

ಜಾನ್ಹವಿ ಕಪೂರ್ ನಟಿಸಿರುವ ‘ಉಲಜ್’ ಸಿನಿಮಾ ಬಿಡುಗಡೆ ಆಗಿತ್ತು ಆದರೆ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ.

  ‘ಉಲಜ್’ ಸಿನಿಮಾ ಫ್ಲಾಪ್

ಬಾಲಿವುಡ್​ನಲ್ಲಿ ಸತತ ಸೋಲು ಕಾಣುತ್ತಿರುವ ಜಾನ್ಹವಿ ಕಪೂರ್, ಈಗ ದಕ್ಷಿಣ ಭಾರತ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುವ ಅವಕಾಶ ನಿರಾಕರಿಸಿದ್ದ ಕೀರ್ತಿ ಸುರೇಶ್