Author: Gangadhar saboji

03 april 2025

ಬೆಂಗಳೂರಿಗೆ ಮತ್ತೆ ಎಂಟ್ರಿ ಕೊಟ್ಟ ವರುಣ: ಎಷ್ಟು ದಿನ ಇರಲಿದೆ ಮಳೆ?

ಕರ್ನಾಟಕದ ಹಲವೆಡೆ 4 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಂಭವ ಇದ್ದು, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆ ಸಾಧ್ಯತೆ ಇದೆ. 

ಸದ್ಯ ಬೆಂಗಳೂರಿನಲ್ಲಿ ಸಾಧಾರಣಾ ಮಳೆಯಾಗುತ್ತಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಾಪಮಾನವು 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

ಬಹಳ ದಿನಗಳ ಬಳಿಕ ಬೆಂಗಳೂರಿನ ಜನರಿಗೆ ಇಂದು ಮತ್ತೆ ವರುಣ ದರ್ಶನವಾಗಿದೆ. ರಿಚ್ಮಂಡ್ ಟೌನ್, ಕಾರ್ಪೊರೇಷನ್, ಶಾಂತಿನಗರ ಸುತ್ತಮುತ್ತ ಸಾಧಾರಣ ಮಳೆ ಆಗಿದೆ. 

ಮಲ್ಲೇಶ್ವರ, ಸುಬ್ರಹ್ಮಣ್ಯನಗರ, ಪ್ರಕಾಶನಗರ ಸುತ್ತಮುತ್ತ ತುಂತುರು ಮಳೆ ಆಗಿದ್ದು, ಜನರು ರೇನ್ ಕೋಟ್, ಛತ್ರಿ ಹಿಡಿದು ರಸ್ತೆಗಿಳಿದ್ದಾರೆ. 

ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ಮಳೆ ಆಗಿದೆ. ತುಂತುರು ಮಳೆಗೆ ಜನರು ಕಂಗಾಲಾಗಿದ್ದಾರೆ. 

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆ ಕೂಡ ಇದ್ದು ಶಾಲಾ ಕಾಲೇಜು ಕಚೇರಿಗೆ ತೆರಳುವ ಜನರಿಗೆ ಕಿರಿಕಿರಿ ಉಂಟಾಗಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಇನ್ನು ಕೋಲಾರ ಜಿಲ್ಲೆಯ ಕೆಜಿಎಫ್, ಬೇತಮಂಗಲ ಸೇರಿ ಹಲವೆಡೆ ಜೋರು ಮಳೆ ಆಗಿದೆ.

ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅರ್ಧಗಂಟೆ ಸುರಿದ ಮಳೆಯಿಂದ ವಾತಾವರಣ ಕೂಲ್ ಆಗಿದೆ.