24 January 2025
Author: Kiran Surya
ನಮ್ಮ ಮೆಟ್ರೋ ಬೆಂಗಳೂರು ಜನತೆಯ ಅಚ್ಚುಮೆಚ್ಚಿನ ಸಾರಿಗೆ ಸಂಪರ್ಕವಾಗಿದೆ.
ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ.
ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ, ಅಸಭ್ಯವಾದ ಫೋಟೋ, ವಿಡಿಯೋ ವಿಡಿಯೋ, ರೀಲ್ಸ್ ಮಾಡುವ, ಜೋರಾಗಿ ಹಾಡು ಹಾಕಿ ತೊಂದರೆ ಕೊಡುವವರಿಗೆ ಬೆಂಗಳೂರು ಬಿಎಂಆರ್ಸಿಎಲ್ ಬಿಸಿ ಮುಟ್ಟಿಸಿದೆ.
ಕಳೆದೊಂದು ವರ್ಷದಲ್ಲಿ 702 ಜನರಿಂದ ಬರೋಬ್ಬರಿ 3,17,220 ರೂ. ದಂಡ ವಸೂಲಿ ಮಾಡಿದೆ.
ಮೆಟ್ರೋದಲ್ಲಿ ಅನುಚಿತ ವರ್ತನೆ ತೋರಿದವರಿಗೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟವರಿಗೆ ದಂಡದ ಬಿಸಿ ಜೊತೆಗೆ ಕೇಸ್ ದಾಖಲಿಸಲಾಗಿದೆ.
ಇಂತಹ ಕಿಡಿಗೇಡಿಗಳ ವಿರುದ್ಧ ಬಿಎಮ್ಆರ್ಸಿಎಲ್ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
Next:- ಸರಳತೆಗೆ ಇನ್ನೊಂದು ಹೆಸರೇ ನಟಿ ಮೋಕ್ಷಿತಾ ಪೈ