ಚಿತ್ರದುರ್ಗ ಜನರ ಮನ ತಣಿಸುತ್ತಿವೆ ವಲಸೆ ಹಕ್ಕಿಗಳು

11 January 2025

Author: Vivek Biradar 

ಚಿತ್ರದುರ್ಗ ನಗರ ಬಳಿಯ ಮುರುಘಾಮಠದ ಮುಂಭಾಗದಲ್ಲಿರುವ ಅರಸನ ಕೆರೆಯಲ್ಲಿ ಅಪರೂಪದ ಪಕ್ಷಿಗಳ ಕಲರವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಪಕ್ಷಿಧಾಮ ವೀಕ್ಷಣೆಗೆ ದೂರದೂರಿಗೆ ಹೋಗುತ್ತಿದ್ದ ಚಿತ್ರದುರ್ಗ ಜನರು ತಮ್ಮ ಊರಲ್ಲೇ ಪಕ್ಷಿ ಸಂಕುಲ ಕಂಡು ಕಣ್ತುಂಬಿಕೊಳ್ಳುತ್ತಿದ್ದಾರೆ. 

ಅರಸನ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಅಭಿವೃದ್ಧಿಪಡಿಸುವಂತೆ ಪಕ್ಷಿ ಪ್ರೇಮಿಗಳು ಒತ್ತಾಯಿಸಿದ್ದಾರೆ. 

ಅರಸನಕೆರೆ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಬೇಕಿದೆ ಎಂದು ಜನರ ಆಗ್ರಹವಾಗಿದೆ.

ಸಾವಿರಾರು ಪಕ್ಷಿಗಳು ಕೆರೆಯಲ್ಲಿ ವಿಹರಿಸುವುದು ಕಂಡು ಪರಿಸರ ಪ್ರಿಯರು ದಿಲ್ ಖುಷ್ ಆಗಿದ್ದಾರೆ.   

ಅಪರೂಪದ ಪಕ್ಷಿಗಳು ಕೆರೆಯ ಸೌಂದರ್ಯ ಹೆಚ್ಚಿಸಿದ್ದು ಜನರ ಮನ ಸೆಳೆಯುತ್ತಿವೆ.

ಕೆರೆ ಅಭಿವೃದ್ಧಿ ಜೊತೆಗೆ ಪಕ್ಷಿಧಾಮವನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪ್ರಾಧಿಕಾರ ಸೂಕ್ತ ಕ್ರಮ ವಹಿಸಬೇಕಿದೆ.

Next:-  ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಎಲ್ಲರಿಗೂ ಠಕ್ಕರ್ ಕೊಟ್ಟ ಹನುಮಂತ