ದಸರಾ ಆನೆ ಅರ್ಜುನ ಸಾವು: 8 ಬಾರಿ ಅಂಬಾರಿ ಹೊತ್ತಿದ್ದ ಆನೆಯ ವಿಶೇಷಗಳಿವು

4-Dec-2023

Author: Gangadhar Saboji

ಒಂಟಿ ಸಲಗ ದಾಳಿಯಿಂದ ಸಾಕಾನೆ ಅರ್ಜುನ(64) ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಸಾವನ್ನಪ್ಪಿದೆ.

ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿದ್ದ ಅರ್ಜುನ.

22 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ.

1968ರಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯದಲ್ಲಿ ಅರಣ್ಯ ಸಿಬ್ಬಂದಿಗಳು ಅರ್ಜುನನನ್ನು ಖೆಡ್ಡಾಗೆ ಕೆಡವಿ ಸೆರೆ ಹಿಡಿದಿದ್ದರು. 

64 ವರ್ಷದ ಸಾಕಾನೆ ಅರ್ಜುನ ಬಳ್ಳೆ ಆನೆ ಶಿಬಿರದಲ್ಲಿದ್ದ. 

2.95 ಮೀ.ಎತ್ತರ, 3.75 ಮೀ.​ ಉದ್ದ, 5775 ಕೆಜಿ ತೂಕವಿದ್ದ.

ಅರ್ಜುನ ವಿಶೇಷತೆ ಅವನ ಗಾಂಭೀರ್ಯ. ಇತರೆ ಆನೆಗಳಂತೆ ಓಡಿ ಹೋಗುತ್ತಿರಲಿಲ್ಲ. 

ಒಂಟಿ ಸಲಗದ ಜೊತೆ ಕಾಳಗಕ್ಕೆ ಇಳಿದಿದ್ದಾಗ ಅರ್ಜುನ ಮೃತಪಟ್ಟಿದ್ದಾನೆ.