ಶಬರಿಮಲೆ ದರ್ಶನ ಹುಬ್ಬಳ್ಳಿ-ಕೊಟ್ಟಾಯಂಗೆ ವಿಶೇಷ ರೈಲು

4-Dec-2023

Author: rakesh Nayak Manchi

Pic:  istockphoto

ಶಬರಿಮಲೆ ಮಂಡಲ ದರ್ಶನ ಆರಂಭವಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರು ಕರ್ನಾಟಕದಿಂದ ಹೋಗುತ್ತಿದ್ದಾರೆ.

ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಕೇರಳದ ಕೊಟ್ಟಾಯಂಗೆ ಎರಡು ವಿಶೇಷ ರೈಲುಗಳು ಸಂಚರಿಸುತ್ತಿವೆ.

Pic:  istockphoto

ರೈಲು ಸಂಖ್ಯೆ 07305 ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಯಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಡಿಸೆಂಬರ್ 2 ರಿಂದ ಜನವರಿ 20ರ ವರೆಗೆ ಸಂಚರಿಸಲಿದೆ.

Pic:  istockphoto

ರೈಲು ಸಂಖ್ಯೆ 07307 ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ ಡಿಸೆಂಬರ್‌ 5 ರಿಂದ ಜನವರಿ 14ರ ವರೆಗೆ ಸಂಚರಿಸಲಿದೆ.

Pic:  istockphoto

ರೈಲು ಸಂಖ್ಯೆ 07305 ಡಿಸೆಂಬರ್ 2 ರಿಂದ 2024 ರ ಜನವರಿ 20 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10.30 ಕ್ಕೆ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ಚಲಿಸುತ್ತದೆ.

Pic:  istockphoto

ರೈಲು ಸಂಖ್ಯೆ 07306 ಕೊಟ್ಟಾಯಂನಿಂದ ಹುಬ್ಬಳ್ಳಿಗೆ ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಚಲಿಸುತ್ತದೆ.

Pic:  istockphoto

ರೈಲು ಸಂಖ್ಯೆ 07307 ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಡಿಸೆಂಬರ್ 5 ರಿಂದ ಜನವರಿ 16 ರವರೆಗೆ ಚಲಿಸುತ್ತದೆ.

Pic:  istockphoto

ರೈಲು ಸಂಖ್ಯೆ 07308 ಬುಧವಾರದಂದು ಬೆಳಿಗ್ಗೆ 11 ಗಂಟೆಗೆ ಕೊಟ್ಟಾಯಂನಿಂದ ಹುಬ್ಬಳ್ಳಿಗೆ ಚಲಿಸುತ್ತದೆ.

Pic:  istockphoto

ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೆ.ಆರ್‌.ಪುರಂ, ವೈಟ್‌ಫೀಲ್ಡ್‌, ಬಂಗಾರಪೇಟೆ, ಸೇಲಂ, ಈರೋಡ್‌, ಪೋತ್ತನ್ನೂರ್‌, ಪಾಲಕ್ಕಾಡ್‌, ತ್ರಿಶೂರ್‌, ಆಲುವಾ ಮತ್ತು ಎರ್ನಾಕುಳಂ ಟೌನ್‌ ಮೂಲಕ ರೈಲು ಸಂಚರಿಸುತ್ತದೆ.

Pic:  istockphoto