ಡಿಕೆ ಶಿವಕುಮಾರ್ ವೈರಾಗ್ಯದ ಮಾತು!

20 January 2025

Author: Ganapathi Sharma

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್ ತ್ಯಾಗದ ಮಾತುಗಳನ್ನಾಡಿದ್ದಾರೆ.

ಯಾರ ಜೊತೆಗೂ ನನಗೆ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕರ್ತರು, ಸಚಿವರು, ಶಾಸಕರು ಎಲ್ಲರೂ ಒಂದೇ ಎಂದು ಡಿಕೆಶಿ ಹೇಳಿದ್ದಾರೆ.

ನನ್ನ ಪಕ್ಷದ ಜೊತೆ ಯಾರು ಕೆಲಸ ಮಾಡ್ತಾರೋ ಎಲ್ಲರೂ ಒಂದೇ‌. ನಾನೇ ಅವರಿಗೆ ತಲೆಬಾಗಿ ಸೇವೆ ಮಾಡುತ್ತೇನೆ: ಡಿಕೆಶಿ

ಪಕ್ಷ ನನಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಮೊದಲಿಂದಲೂ ನಾನು ತ್ಯಾಗ ಮಾಡಿಕೊಂಡು ಬಂದಿದ್ದೇನೆ ಎಂದ ಡಿಕೆಶಿ

ಧರಂಸಿಂಗ್ ಸರ್ಕಾರದಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಧಮ್ ತಡೆದುಕೊಂಡು ತ್ಯಾಗ ಮಾಡಿಕೊಂಡು ಬಂದಿದ್ದೇನೆ: ಡಿಕೆಶಿ

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಮುಖ್ಯ, ಪಕ್ಷದಿಂದಲೇ ಬೆಳೆದವನು ಎಂದ ಡಿಕೆ ಶಿವಕುಮಾರ್​

ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ, ಜನರಿಗೆ ಒಳ್ಳೆಯದಾಗುತ್ತದೆ ಅಷ್ಟು ಸಾಕು ಎಂದ ಡಿಕೆ ಶಿವಕುಮಾರ್

NEXT - ಬಿ ಖಾತಾವನ್ನು ಎ ಖಾತಾಗೆ ವರ್ಗಾಯಿಸಲು ಏನು ಮಾಡಬೇಕು?