27 February 2025
Author: Ganapathi Sharma
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭಾರಿ ಸ್ಪಂದನೆ ದೊರೆತಿದೆ.
ರಾಜ್ಯದ ಸಾರಿಗೆ ಇಲಾಖೆಯ 4 ನಿಗಮಗಳ ಬಸ್ಗಳಲ್ಲಿ ಈವರೆಗೆ ಮಹಿಳೆಯರು 400 ಕೋಟಿ ಬಾರಿ ಪ್ರಯಾಣ ಮಾಡಿದ್ದಾರೆ.
2023ರ ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿತ್ತು.
ಶಕ್ತಿ ಯೋಜನೆ ಯೋಜನೆಯಡಿ ಸಾರಿಗೆ ನಿಗಮಗಳ ಸಾಮಾನ್ಯ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.
2023ರ ಜೂನ್ 11ರಿಂದ 2025ರ ಫೆಬ್ರವರಿ 24ರವರೆಗೆ ಒಟ್ಟು 400,00,28,623 ಬಾರಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಓಡಾಟ ಮಾಡಿದ್ದಾರೆ.
ಮಹಿಳೆಯರು ಸಂಚರಿಸಿದ ಟಿಕೆಟ್ ಮೌಲ್ಯ 9 ಸಾವಿರ ಕೋಟಿಗೂ ಅಧಿಕ ಎಂಬುದು ತಿಳಿದುಬಂದಿದೆ.
2023ರ ಜೂ. 11ರಿಂದ 2025ರ ಫೆ. 24 ರವರೆಗೆ 9803,87,63,754 ಕೋಟಿ ರೂ. ಟಿಕೆಟ್ ಮಾರಾಟವಾಗಿದೆ.
NEXT - ಜಮೀನಿಗೆ ಮಾಡೆಲ್ ಗಳ ಅರೆನಗ್ನ ಫೋಟೋ ಅಳವಡಿಸಿದ ರೈತ!