20 January 2025
Author: Rajendra Simha
ಸದಾ ಬಯಲು ಸೀಮೆಯಲ್ಲಿ ಬರ ಹಾಗೂ ಬಿಸಿಲಿನ ತಾಪಕ್ಕೆ ಬಳಲುವ ಜನರಿಗೆ ಮಲೆನಾಡಿನ ಅನುಭವವನ್ನು ನೀಡುವ ಸಲುವಾಗಿಯೇ ಸೃಷ್ಟಿಯಾಗಿರುವ ಮಂಜಿನಲೋಕ. ಕೋಲಾರದಲ್ಲಿ ವರ್ಷಕ್ಕೊಮ್ಮೆ ಸೃಷ್ಟಿಯಾಗಿವ ಮಂಜಿನಲೋಕ ಹೇಗಿರುತ್ತೆ ನೋಡಿ.
ಕೋಲಾರದಲ್ಲಿ ನಿತ್ಯ ದಟ್ಟವಾದ ಇಬ್ಬನಿ ಕವಿದಿರುತ್ತಿದೆ. ಇಬ್ಬನಿ ಈ ಭಾಗದ ಗಿರಿಶಿಖರಗಳನ್ನ ಆವರಿಸಿ, ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣದಂತ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿದೆ. ಇಂತಹ ಇಬ್ಬನಿಯಿಂದ ಆವೃತವಾಗಿರುವ ಇಲ್ಲಿನ ಬೆಟ್ಟಗಳನ್ನ ನೊಡೋದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದು.
ವಾಯುಬಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ಆಗಾಗ ಅಪ್ಪಳಿಸಿದ ಚಂಡಮಾರುತದಿಂದ ಒಂದಷ್ಟು ಮಳೆಯಾಗಿದ್ದನ್ನು ಬಿಟ್ಟರೆ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಮಳೆಯಾಗಲಿಲ್ಲಿ. ಮುಂಗಾರು ಮಳೆ ಹಾಗೂ ಹಿಂಗಾರು ಎರಡು ಮಳೆಗಳು ರೈತರ ನೀರೀಕ್ಷೆಯನ್ನು ಹುಸಿ ಮಾಡಿದ್ದವು.
ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸುತ್ತಿದೆ. ಪರಿಣಾಮ ಗಿಡ-ಮರ ಎಲೆಗಳಿಂದ ಇಬ್ಬನಿ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ದಟ್ಟವಾದ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ನಿರ್ಮಾಣವಾಗಿದೆ.
ಕಳೆದ 15 ದಿನದಿಂದ ದಿನಬಿಟ್ಟು ದಿನ ಕೋಲಾರ ನಗರ ಸೇರಿದಂತೆ ಎಲ್ಲೆಡೆ ದಟ್ಟವಾದ ಮಂಜು ಆವರಿಸಿರುತ್ತದೆ. ಬೆಳಗ್ಗೆ 8 ಗಂಟೆಯಾದರೂ ದಟ್ಟವಾದ ಇಬ್ಬನಿ ನಗರವನ್ನು ಬಿಟ್ಟು ಹೋಗಿರುವುದಿಲ್ಲ.
ಹವಾಮಾನ ವೈಪರಿತ್ಯದಿಂದ ನೆಗಡಿ, ಕೆಮ್ಮು, ಹಾಗೂ ಜ್ವರದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ವಿಹಾರಿಗಳು ಕೂಡಾ ಕೆಲವರು ಇದನ್ನು ಎಂಜಾಯ್ ಮಾಡಿದ್ರೆ ಇನ್ನು ಕೆಲವರು ಇದರಿಂದ ದೂರ ಉಳಿಯುತ್ತಿದ್ದಾರೆ.
ಒಟ್ಟಾರೆ ಈ ವರ್ಷವಂತೂ ಮೇಲಿಂದ ಮೇಲೆ ಚಂಡಮಾರುತದ ಜಿಟಿ ಜಿಟಿ ಮಳೆಯನ್ನು ಎಂಜಾಯ್ ಮಾಡಿದ್ದ ಜನರಿಗೆ ಈಗ ಮಂಜಿನಾಟ ಮತ್ತೆ ಮಲೆನಾಡು ವಾತಾವರಣವನ್ನೇ ನೆನಪು ಮಾಡುತ್ತಿದೆ. ಸದಾ ಬಿಸಿಲು, ಬರಗಾಲದಿಂದಲೇ ಹೆಸರಾಗಿದ್ದ ಕೋಲಾರದಲ್ಲಿ ಈಗಂತು ಈ ಮಂಜಿನ ವಾತಾವರಣ ಮಲೆನಾಡಿನ ಅನುಭವ ನೀಡುತ್ತಿದೆ.
Next:- ಪಾಕಿಸ್ತಾನದಿಂದ ಭಾರತಕ್ಕೆ ಬಂದ ಚಾಂಪಿಯನ್ಸ್ ಟ್ರೋಫಿ