19 January 2025
Author: Ravi Moki
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಆಸ್ಪತ್ರೆಯ UPS ಬ್ಯಾಟರಿಗಳನ್ನು ಆ್ಯಂಬುಲೆನ್ಸ್ ಮೂಲಕ ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಯುಪಿಎಸ್ 12 ಬ್ಯಾಟರಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಯುಪಿಎಸ್ ಬ್ಯಾಟರಿ ಸ್ಥಳಾಂತರ ವೇಳೆ ಸ್ಥಳದಲ್ಲಿ ಬಾದಾಮಿ ಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಆಪ್ತ ಹನುಮಂತ ಅಪ್ಪಣ್ಣವರ್ ಸ್ಥಳದಲ್ಲಿದ್ದರು.
ಬ್ಯಾಟರಿ ಸಾಗಾಟದ ಬಗ್ಗೆ ನನಗೆ ಗೊತ್ತಿಲ್ಲ. ವಿಚಾರಿಸಿ ಹೇಳುತ್ತೇನೆ ಎಂದು ಬಾದಾಮಿ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ವಿ.ಕೆ.ಶೆಟ್ಟರ್ ಹಾರಿಕೆ ಉತ್ತರ ನೀಡಿದ್ದಾರೆ. ನೆಲ್ಲಕ್ಕೆ ಬಿದ್ದಿದೆ.
12 ಬ್ಯಾಟರಿ ಕೊಂಡೊಯ್ದಿದ್ದನ್ನು ಆಂಬ್ಯುಲೆನ್ಸ್ ಚಾಲಕ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Next:- ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪು ಹೇಗಿದೆ ನೋಡಿ