ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 9:30ರಿಂದ ಜನತಾ ದರ್ಶನ ನಡೆಸಿದರು. ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಶನ
ಸಿಎಂ ಸಿದ್ದರಾಮಯ್ಯ ಅವರು ಇಂದಿನ ಜನತಾ ದರ್ಶನದಲ್ಲಿ 3,500 ಅರ್ಜಿಗಳನ್ನು ಸ್ವೀಕರಿಸಿದರು. ಈ ಅರ್ಜಿಗಳಿಗೆ 1 ವಾರದ ಒಳಗೆ ಉತ್ತರ ನೀಡಬೇಕು. 15 ದಿನಗಳಲ್ಲಿ ಇತ್ಯರ್ಥವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
3,500 ಅರ್ಜಿಗಳು ಸ್ವೀಕಾರ
ಮಧ್ಯಾಹ್ನ 3 ಗಂಟೆವರೆಗೆ 1805 ಅರ್ಜಿಗಳ ಸ್ವೀಕಾರ. 37 ಸಮಸ್ಯೆಗಳಿಗೆ ಪರಿಹಾರ . ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 203 ಅರ್ಜಿಗಳ ಸಲ್ಲಿಕೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದಂತೆ 75 ಅರ್ಜಿಗಲು ಸಲ್ಲಿಕೆ.
3 ಗಂಟೆತನಕ 1805 ಅರ್ಜಿ ಸ್ವೀಕಾರ
ಮಧ್ಯಾಹ್ನ 1 ಗಂಟೆವರೆಗೆ 1,147 ಅರ್ಜಿಗಳನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಸ್ಥಳದಲ್ಲೇ 20 ಅರ್ಜಿಗಳಿಗೆ ಪರಿಹಾರ ನೀಡಲಾಯಿತು. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 130 ಅರ್ಜಿಗಳು ಬಂದಿದ್ದವು.
ಮಧ್ಯಾಹ್ನ 1 ಗಂಟೆವರೆಗೆ 1,147 ಅರ್ಜಿ
ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ ಯುವಕನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲೇ 5 ಲಕ್ಷ ರೂ. ಮಂಜೂರು ಮಾಡಿದರು.
ಯುವಕನಿಗೆ 5 ಲಕ್ಷ ರೂ. ಮಂಜೂರು
ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಿರಿಯ ನಾಗರಿಕರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿಸುವಂತೆ ಸಿದ್ದರಾಮಯ್ಯರ ಬಳಿ ಮನವಿ ಮಾಡಿದರು.
ರಾಹುಲ್ ಗಾಂಧಿ ಗಭೇಟಿಗೆ ಮನವಿ
ಗದಗ ಜಿಲ್ಲೆಯಿಂದ ಬಂದಿದ್ದ ದಂಪತಿ ತಮ್ಮ 7 ತಿಂಗಳ ಮಗು ಮೇಘಾಶ್ರೀ ಹೃದಯದಲ್ಲಿ 2 ರಂಧ್ರ ಇದ್ದು, ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂದು ಅಳಲು ತೋಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡಲೆ 2 ಲಕ್ಷ ಪರಿಹಾರ ಘೋಸಿದ್ದರು.
ಮಹಿಳೆಗೆ 2 ಲಕ್ಷ ರೂ. ಪರಿಹಾರ
ಜನತಾ ದರ್ಶನಕ್ಕೆ ಆಗಮಿಸಿದ್ದ ಜನರಿಗೆ ಗೃಹ ಕಚೇರಿ ಕೃಷ್ಣಾದಿಂದ ಮೆಜೆಸ್ಟಿಕ್ವರೆಗೆ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ ಅವಕಾಶ ಮಾಡಿಕೊಡಲಾಯಿತು
ಜನತಾ ದರ್ಶನಕ್ಕೆ ಬಂದವರಿಗೆ ಉಚಿತ ಬಸ್
ರಕ್ಷಿತಾ ಮಾತ್ರವಲ್ಲ ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ
ರಕ್ಷಿತಾ ಮಾತ್ರವಲ್ಲ ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ