Author: Ganapathi Sharma

27 March 2025

ನಂದಿನಿ ಹಾಲಿನ ದರ ಏರಿಕೆ: ಯಾವ ಪ್ಯಾಕೆಟ್​​ಗೆ ಎಷ್ಟು ದರ? ಇಲ್ಲಿದೆ ವಿವರ

ನಂದಿನಿ ಹಾಲಿನ ದರ 4 ರೂ. ಏರಿಕೆ ಮಾಡುವ ಸಂಬಂಧ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸದ್ಯ ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್​ಗೆ 24 ರೂಪಾಯಿ ಇದೆ. ಒಂದು ಲೀಟರ್​ಗೆ 45 ರೂಪಾಯಿ ಇದೆ.

ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್​ಗೆ 26 ರೂ. ಮತ್ತು 1 ಲೀಟರ್ ಹಾಲಿಗೆ 49 ರೂಪಾಯಿ ಆಗಲಿದೆ.

ನೀಲಿ‌ ಪ್ಯಾಕೆಟ್ ಹಾಲು 44 ರೂ. ನಿಂದ 48 ರೂ.ಗೆ ಹೆಚ್ಚಳವಾಗಲಿದೆ. ಆರೆಂಜ್ ಪ್ಯಾಕೆಟ್ ಹಾಲು 54 ರೂ‌.ನಿಂದ 58  ರೂ.ಗೆ ಏರಿಕೆಯಾಗಲಿದೆ.

ಸಮೃದ್ಧಿ ಹಾಲಿನ‌ ಪ್ಯಾಕೆಟ್ 56 ರೂ.ನಿಂದ 60 ರೂ.ಗೆ ಹೆಚ್ಚಳವಾಗಲಿದೆ.

ಗ್ರೀನ್ ಸ್ಪೇಷಲ್ 54 ರೂ.ನಿಂದ 58 ರೂ.ಗೆ, ನಾರ್ಮಲ್ ಗ್ರೀನ್ 52 ರೂ.ನಿಂದ 56 ರೂ.ಗೆ ಏರಿಕೆಯಾಗಲಿದೆ.

ನಂದಿನಿ ಹಾಲಿನ ದರ ಏರಿಕೆ ಸಂಬಂಧ ಮಾರ್ಚ್ 24 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿತ್ತು.

ಪ್ರತಿ ಲೀಟರ್ ಹಾಲಿಗೆ 5 ರೂ. ದರ ಹೆಚ್ಚಿಸಲು ವಿವಿಧ ಜಿಲ್ಲೆಗಳ ಹಾಲು ಒಕ್ಕೂಟಗಳು ಮನವಿ ಮಾಡಿದ್ದವು.

ಒಂದು ವೇಳೆ ಹಾಲಿನ ದರ ಏರಿಕೆ ಮಾಡಿದರೂ ನೇರವಾಗಿ ರೈತರಿಗೆ ತಲುಪಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದರಿಂದ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳಲಿದೆ.