02 February 2025
Author: Ganapathi Sharma
ಮಂಡಿನ ನೋವಿನ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಸಿದ್ದರಾಮಯ್ಯ.
ಡಾ.ಸತ್ಯನಾರಾಯಣ ಅವರು ಸಿಎಂ ಸಿದ್ದರಾಮಯ್ಯ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಲೆಗಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೆ ಮಂಡಿ ನೋವು ಹೆಚ್ಚಾಗಿದೆ.
ಲೆಗಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಾಗದಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಬೇರೆ ಸಮಸ್ಯೆ ಇಲ್ಲ ಎಂದ ವೈದ್ಯರು.
2 ದಿನ ಪ್ರಯಾಣ ಮಾಡದೆ ವಿಶ್ರಾಂತಿ ಪಡೆಯುವಂತೆ ಸಿದ್ದರಾಮಯ್ಯಗೆ ವೈದ್ಯರು ಸಲಹೆ ನೀಡಿದ್ದಾರೆ.
ಮಂಡಿ ನೋವಿನ ಕಾರಣ ಮುಖ್ಯಮಂತ್ರಿಗಳ ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.
ಇಂದು ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಹಾಗೂ ರಾಮನಗರ ಪ್ರವಾಸ ಕೈಗೊಳ್ಳಬೇಕಿತ್ತು. ಅದು ರದ್ದಾಗಿದೆ.
NEXT - ಕೇಂದ್ರ ಬಜೆಟ್: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಏನೇನು ಸಿಕ್ತು?