ಮಡಕೇರಿ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ 

18  ಅಕ್ಟೋಬರ್ 2023

ದಕ್ಷಿಣ ಮಂದಾಕಿನಿ, ಕನ್ನಡ ನಾಡಿನ ಕಾವೇರಿ ನದಿ ಕೊಡಗಿನ ಬಾಗಮಂಡಲದ ತಲಕಾವೇರಿಯಲ್ಲಿ ಉಗಮವಾಗುತ್ತದೆ. 

ದಕ್ಷಿಣ ಮಂದಾಕಿನಿ ಕಾವೇರಿ

ತಡರಾತ್ರಿ 1 ಗಂಟೆ 27 ನಿಮಿಷಕ್ಕೆ ಸರಿಯಾಗಿ ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ.

ಕಾವೇರಿ ತೀರ್ಥೋದ್ಭವ

ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಮೇಲೆ ಅರ್ಚಕರು ಕಾವೇರಿ ನೀರನ್ನು ಎರಚಿದ್ದು, ತೀರ್ಥ ಪ್ರೋಕ್ಷಣೆಯಿಂದ ಭಕ್ತರು ಪುನೀತರಾದರು.

ತೀರ್ಥ ಪ್ರೋಕ್ಷಣೆಯಿಂದ ಪುನೀತರಾದ ಭಕ್ತರು

ಪ್ರಧಾನ ಅರ್ಚಕರಾದ ಪ್ರಶಾಂತ್ ಆಚಾರ್, ಗುರುರಾಜ ಅಚಾರ, ರವಿರಾಜ್ ಆಚಾರ್ ನೇತೃತ್ವದಲ್ಲಿ ಬ್ರಹ್ಮ ಕುಂಡಿಕೆ ಮತ್ತು ಕಾವೇರಿ ಮೂರ್ತಿಗೆ ಪೂಜಾ ಕೈಂಕರ್ಯಗಳು ನಡೆದವು

ಪೂಜಾ ಕೈಂಕರ್ಯಗಳು

ಕಾವೇರಿ ತೀರ್ಥೋದ್ಭವದ ಪುಣ್ಯ ಸಮಯದಲ್ಲಿ ಸಂಸದ ಪ್ರತಾಪ್​ ಸಿಂಹ ಕೂಡ ಸ್ಥಳದಲ್ಲಿ ಇದ್ದು, ಕಾವೇರಿ ನದಿಗೆ ಕೈಮುಗಿದು ನಮಿಸಿದರು. ನಂತರ ನೆರದ ಭಕ್ತರಿಗೆ ಆರತಿ ನೀಡಿದರು.    

ಕಾವೇರಿ ಉಗಮಸ್ಥಾನಕ್ಕೆ ಕೈ ಮುಗಿದ ಸಂಸದ

ಕಾವೇರಿ ನದಿಯ ತೀರ್ಥೋದ್ಭವವದ ದರ್ಶನ ಪಡೆಯಲು ಕೊಡಗು ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ.  

ಹರಿದು ಬಂದ ಅಸಂಖ್ಯ ಜನ

ಕೊಡಗಿನ ಬಾಗಮಂಡಲದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ದೇವಾಲಯವನ್ನು ವಿಶೇಷ ವಿದ್ಯುತ್​​ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ದೀಪಗಳಿಂದ ಕಂಗೊಳಿಸಿದ ದೇವಸ್ಥಾನ

ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಭಕ್ತರು ಮನೆಗೆ ಕೊಂಡೊಯ್ಯುತ್ತಾರೆ.   

ತೀರ್ಥವನ್ನು ಮನೆಗಳಿಗೆ ಕೊಂಡುಯ್ಯುವ ಭಕ್ತರು

ಬಿಗ್​ಬಾಸ್​ ಮನೆಯಲ್ಲಿ ನನ್ನನ್ನು ಟಾರ್ಗೆ ಮಾಡಲಾಗುತ್ತಿದೆ

Pic credit - Times Travel