01-12-2023

ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಜೆಡಿಎಸ್ ಅಭ್ಯರ್ಥಿ: ಹೆಚ್ ಡಿ ದೇವೇಗೌಡ ಘೋಷಣೆ

Author: ಗಣಪತಿ ಶರ್ಮ

ಸಂಸದ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ: ದೇವೇಗೌಡ

ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ನಡೆದ ಸಭೆಯ ಬಳಿಕ ಘೋಷಣೆ

ಹಾಸನ ಕ್ಷೇತ್ರದ ಲೋಕಸಭೆ ಅಭ್ಯರ್ಥಿ ಕುರಿತ ಗೊಂದಲಗಳಿಗೆ ತೆರೆ ಎಳೆದ ಜೆಡಿಎಸ್ ವರಿಷ್ಠ

ನಾನು ರಾಜ್ಯಸಭಾ ಸದಸ್ಯನಾಗಿದ್ದೇನೆ. ಎರಡು ವರ್ಷಗಳ ಅಧಿಕಾರಾವಧಿ ಇದೆ. ಲೋಕಸಭೆ ಸ್ಪರ್ಧೆ ಇಲ್ಲವೆಂದ ಮಾಜಿ ಪ್ರಧಾನಿ

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ: ದೇವೇಗೌಡ

ಜೆಡಿಎಸ್, ಬಿಜೆಪಿ ಸೀಟು ಹಂಚಿಕೆ ಬಗ್ಗೆ ಪ್ರಧಾನಿ, ಬಿಜೆಪಿ ಅಧ್ಯಕ್ಷಕರು, ಹೆಚ್​ಡಿಕೆ ತೀರ್ಮಾನ ಮಾಡಲಿದ್ದಾರೆ: ದೇವೇಗೌಡ

ಲೋಕಸಭಾ ಚುನಾವಣೆ ಸಂಬಂಧ ಸಲಹೆ ಪಡೆಯಲು ದೇವೇಗೌಡರು ಸಭೆ ನಡೆಸಿದ್ದಾರೆ

ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ದೇವೇಗೌಡರ ಸಭೆಯಲ್ಲಿ ಭಾಗಿಯಾಗಿದ್ದಾರೆ