Author: Gangadhar saboji

31 March 2025

ಕರ್ನಾಟಕದಾದ್ಯಂತ ಕಳೆಗಟ್ಟಿದ ರಂಜಾನ್​ ಹಬ್ಬ 

ಇಂದು ಕರ್ನಾಟಕದಾದ್ಯಂತ ರಂಜಾನ್​ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. 30 ದಿನಗಳ ಉಪವಾಸದ ನಂತರ ಮುಸ್ಲಿಮರು ಈದ್​ ಉಲ್​ ಫಿತ್​ರ್ ಹಬ್ಬವನ್ನು ಸಂಭ್ರಮಿಸಿದ್ದು ಹೀಗೆ.

ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ವಿಶೇಷ ನಮಾಜ್ ಮಾಡಲಾಯಿತು. ಮುಸ್ಲಿಂ ಬಾಂಧವರು ಪರಸ್ಪರ ಶುಭಹಾರೈಸಿದರು.

ತುಮಕೂರಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ವೇಳೆ  ಜಿಲ್ಲಾ ಉಸ್ತುವಾರಿ ಸಚಿವ ಡಾ ಪರಮೇಶ್ವರ್​​ ಭಾಗಿಯಾಗಿದ್ದರು.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹ್ಮದ್​ ಭಾಗಿಯಾಗಿದ್ದರು. ವಕ್ಫ್​​ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರಾರ್ಥನೆ ಮಾಡಿದ್ದಾರೆ.

ಹಾಸನದಲ್ಲಿ ಕೂಡ ರಂಜಾನ್ ಸಡಗರ ಜೋರಿತ್ತು. ಒಂದು ತಿಂಗಳ ಉಪವಾಸ ವೃತಾಚರಣೆ ಮುಗಿಸಿ ಹಬ್ಬ ಆಚರಿಸಿದ ಮುಸ್ಲಿಮರು.

ಮೈಸೂರಿನ ಮಂಡಿ ಮೊಹಲ್ಲಾ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

ಕುಂದಾನಗರಿ ಬೆಳಗಾವಿಯಲ್ಲಿ ರಂಜಾನ್ ಹಬ್ಬದ ಸಂಭ್ರಮ ಜೋರಾಗಿತ್ತು. ಈ ವೇಳೆ ಮೌನ ಪ್ರತಿಭಟನೆ ಕೂಡ ಮಾಡಲಾಗಿದೆ.

ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ರೀತಿಯಾಗಿ ಬಳ್ಳಾರಿ, ಯಾದಗಿರಿ, ವಿಜಯಪುರ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ರಂಜಾನ್​ ಹಬ್ಬ ಆಚರಿಸಲಾಗಿದೆ.