01-01-2024

ಅಬಕಾರಿ ಇಲಾಖೆಗೆ ಒಂದೇ ದಿನ 193 ಕೋಟಿ ಆದಾಯ!

Author: ಗಣಪತಿ ಶರ್ಮ

ಹೊಸ ವರ್ಷಾಚರಣೆ ಕಾರಣ ಭಾನುವಾರ ಒಂದೇ ದಿನ 193 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್  3,07,953 ಪೆಟ್ಟಿಗೆ, ಬಿಯರ್ 1,95,005 ಪೆಟ್ಟಿಗೆ ಮಾರಾಟವಾಗಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಡಿಸೆಂಬರ್ 23 ರಿಂದ ಡಿಸೆಂಬರ್ 31 ವರೆಗೂ ಭರ್ಜರಿ ಮದ್ಯ ಮಾರಾಟವಾಗಿದೆ.

ಕೇವಲ ಏಳು ದಿನಗಳಲ್ಲಿ 1,070 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ಡಿಸೆಂಬರ್ 23 ರಿಂದ ಡಿಸೆಂಬರ್ 31 ರವರೆಗೆ ಐಎಂಎಲ್ ಲಿಕ್ಕರ್ ಒಟ್ಟು 22.2 ಲಕ್ಷ ಬಾಕ್ಸ್ ಮಾರಾಟವಾಗಿದ್ದು, 900 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

14.7 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಇದರಿಂದ 170 ಕೋಟಿ ರೂ ಆದಾಯ ಸಂಗ್ರಹವಾಗಿದೆ.