ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

30-Nov-2023

Pic credit - istock

Author: Rakesh Nayak Manchi

ಬೆಂಗಳೂರಿನ ಬೈಯಪ್ಪನಹಳ್ಳಿ-ಕೆಆರ್ ಪುರಂ ನಡುವೆ ಕಾಮಗಾರಿ ನಡೆಯಲಿರುವ ಹಿನ್ನೆಲೆ ರೈಲು ಸೇವೆಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.

Pic credit - gettyimages

ರೈಲು ಸಂಖ್ಯೆ 06527 ಬಂಗಾರಪೇಟೆ-SMVT ಬೆಂಗಳೂರು ಮೆಮು ರೈಲು ನ.30 ಮತ್ತು ಡಿ.14 ರಂದು ರದ್ದಾಗಲಿದೆ.

Pic credit - istock

ರೈಲು ಸಂಖ್ಯೆ 06528 ಎಸ್‌ಎಂವಿಟಿ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು ಡಿ.1 ಮತ್ತು 15 ರಂದು ರದ್ದಾಗಲಿದೆ.

Pic credit - istock

ರೈಲು ಸಂಖ್ಯೆ 16521/16522 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ ಮೆಮು ಎಕ್ಸ್‌ಪ್ರೆಸ್ ಅನ್ನು ಡಿ.5 ಮತ್ತು 12 ರಂದು ರದ್ದುಗೊಳಿಸಲಾಗುತ್ತದೆ.

Pic credit - gettyimages

ರೈಲು ಸಂಖ್ಯೆ 16594 ನಾಂದೇಡ್-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ನ.30, ಡಿ.14 ರಂದು ಬೆಂಗಳೂರು ಕಂಟೋನ್ಮೆಂಟ್ ಬಿಟ್ಟು ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಬೆಂಗಳೂರು ಮಾರ್ಗವಾಗಿ ಚಲಿಸಲಿದೆ.

Pic credit - istock

ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ ಡಿ.4, 11 ರಂದು ಅನಂತಪುರ-ಧರ್ಮಪುರಿ ನಡುವಿನ ನಿಲುಗಡೆಯನ್ನು ಬಿಟ್ಟು ಗುಂತಕಲ್, ರೇಣಿಗುಂಟಾ, ಜೋಲಾರ್‌ಪೇಟ್ಟೈ ಮತ್ತು ಸೇಲಂ ಮೂಲಕ ಚಲಿಸಲಿದೆ.

Pic credit - gettyimages

ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16593 KSR ಸಂಚಾರ ಸಮಯವನ್ನು 75 ನಿಮಿಷಗಳ ಕಾಲ ಮರುನಿಗದಿಪಡಿಸಲಾಗಿದೆ. ಡಿ.5, 12 ರಂದು ಸದರಿ ಎಕ್ಸ್‌ಪ್ರೆಸ್ ರೈಲು KSR, ಯಶವಂತಪುರ, ಯಲಹಂಕ ಮೂಲಕ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುವುದಿಲ್ಲ.

Pic credit - istock

ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಡೈಲಿ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ ಸಂಜೆ 4.40 ಕ್ಕೆ ಹೊರಡುತ್ತದೆ, ಡಿಸೆಂಬರ್ 3 ರಂದು ಮೂರು ಗಂಟೆಗಳ ಕಾಲ ಮರುನಿಗದಿಪಡಿಸಲಾಗಿದೆ.

Pic credit - istock

ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ಡಿ.1-10 ರ ನಡುವೆ ಕಾರಟಗಿ ಬದಲಿಗೆ ಗಂಗಾವತಿಯಲ್ಲಿ ಕೊನೆಗೊಳ್ಳುತ್ತದೆ.

Pic credit - istock

ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ಡಿ.2-11 ರ ನಡುವೆ ಕಾರಟಗಿ ಬದಲಿಗೆ ಗಂಗಾವತಿಯಿಂದ ಹೊರಡಲಿದೆ. 

Pic credit - gettyimages