ವಡೆ ಕೊಟ್ಟು ಟ್ರಾಫಿಕ್ ರೂಲ್ಸ್ ಜಾಗೃತಿ ಮೂಡಿಸಿದ ಸಾಮಾಜಿಕ ಕಾರ್ಯಕರ್ತ
01 Dec 2023
Author: Vivek Biradar
ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಟ್ರಾಫಿಕ್ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರು ಜನರು ಪಾಲಿಸುವುದಿಲ್ಲ.
ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯ ರೇಣುಕ ಮಂದಿರ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಅವರು ರಾಂಗ್ ರೂಟ್ (ಒನ್ ವೇ) ನಲ್ಲಿ ಬಂದವರಿಗೆ ಉದ್ದಿನ ವಡೆ ಕೊಟ್ಟು ಸ್ವಾಗತಿಸಿದರು.
ನೀವು ರಾಂಗ್ ರೂಟ್ನಲ್ಲಿ ಬಂದರೇ ನಿಮ್ಮನೆಯವರು ನಿಮ್ಮ ತಿಥಿ ವಡೆ ತಿನ್ನಬೇಕಾಗುತ್ತದೆ ಎಂದು ಹೇಳುವ ಮೂಲಕ ವಿಭಿನ್ನವಾಗಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತರು ರಾಂಗ್ ರೂಟ್ನಲ್ಲಿ ಬಂದವರಿಗೆ ಉದ್ದಿನ ವಡೆ ಕೊಟ್ಟು ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.
ಒನ್ ವೇ ರಸ್ತೆಯಲ್ಲಿ ಬರುವುದರಿಂದ ಅಪಘಾತಗಳು ಜಾಸ್ತಿಯಾಗುತ್ತಿವೆ. ಇದರಿಂದ ನಿರಂತರವಾಗಿ ಸಂಚಾರದ ತೊಂದರೆಯಾಗುತ್ತಿದೆ. ಹೀಗಾಗಿ ದಯವಿಟ್ಟು ರಾಂಗ್ ರೂಟ್ನಲ್ಲಿ ಬರಬೇಡಿ ಎಂದು ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದರು.