11 January 2025
Author: Gangadhar Saboji
ಬ್ಯಾಡಗಿ ಮೆನಸಿನ ಕಾಯಿ ಅಂದ್ರೆ ಇಡೀ ದೇಶಕ್ಕೆ ಫೇಮಸ್.
ಕೊಪ್ಪಳ ಜಿಲ್ಲೆಯೊಂದರಲ್ಲೇ 4 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿತ್ತು.
ಬ್ಯಾಡಗಿ ಮೆಣಸಿನಕಾಯಿ ಬೆಳೆದ ರೈತರು ಮಾರಾಟ ಮಾಡಲು ಹೋದ್ರೆ ಖರೀದಿ ಮಾಡುವವರೇ ಇಲ್ಲದಾಗಿದೆ.
ಈ ಮೊದಲು ಮೆಣಸಿನಕಾಯಿ ಪ್ರತಿ ಕ್ವಿಂಟಲ್ ಗೆ 45 ರಿಂದ 50 ಸಾವಿರ ರೂ ಗೆ ಮಾರಾಟ ಮಾಡಲಾಗುತ್ತಿತ್ತು.
ಆದರೆ ಈಗ ಕ್ವಿಂಟಲ್ ಗೆ 10 ರಿಂದ 15 ಸಾವಿರ ರೂ ಗೆ ಮಾರಾಟ ಮಾಡಲಾಗುತ್ತಿದೆ.
ಹಾಕಿದ ಬಂಡವಾಳ ಕೂಡ ವಾಪಸ್ ಬರ್ತಿಲ್ಲ ಅಂತ ರೈತರು ಕಂಗಾಲಾಗಿದ್ದಾರೆ.
ಸರ್ಕಾರ ನಿಗದಿತ ಬೆಂಬಲ ಬೆಲೆಯನ್ನ ಘೋಷಿಸುವಂತೆ ರೈತರು ಆಗ್ರಹಿಸಿದ್ದಾರೆ.