ಹಾಸನದಲ್ಲಿ ಪತ್ತೆಯಾಯ್ತು ಶ್ರೀರಾಮನ ಕುರುಹು; ಪಾದುಕೆ ನೋಡಲು ಮುಗಿಬಿದ್ದ ಜನ

30 Dec 2023

Author: Kiran Hanumant Madar

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲೇ ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾಗನೂರು ಗ್ರಾಮದಲ್ಲಿ ಶ್ರೀರಾಮನ ಕುರುಹು ಪತ್ತೆ.

 ಶ್ರೀರಾಮನ ಕುರುಹು

 ಶ್ರೀರಾಮ ಸಂಚರಿಸಿ ಇಲ್ಲೇ ಹಲವು ದಿನ ಕಳೆದಿದ್ದ, ಪಗಡೆ ಆಡಿ ವಿಹಾರ ಮಾಡಿದ್ರು ಎಂಬುದರ ಕುರುಹಾಗಿ ಮರ್ಯಾದ ಪುರುಷೋತ್ತಮನ ಪಾದುಕೆಗಳ ಹೆಜ್ಜೆ ಗುರುಜು ಗೋಚರವಾಗಿವೆ.

ರಾಮ ಸಂಚರಿಸಿ

ದಶಮುಖ ರಾವಣ ಸಂಹಾರ ನಂತರ ಪಾಪ ಪ್ರಾಯಶ್ಚಿತ್ತವಾಗಿ ಶ್ರೀರಾಮ ಶತಮಾನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಎಂಬುದಕ್ಕೆ ಕುರುಹುಗಳು ಲಭ್ಯವಾಗಿದೆ.

ಶತಮಾನಗಳ ಹಿಂದೆ

ರಾಮ, ಹನುಮರ ಪಾದದ ಹೆಜ್ಜೆ ಗುರುತು ಕಂಡ ಭಕ್ತರು ಆಶ್ಚರ್ಯಗೊಂಡಿದ್ದು, ಪುರಾಣ ಹಿನ್ನೆಲೆಯ ಪುಣ್ಯ ಸ್ಥಳ ಸಂರಕ್ಷಣೆಗೆ ಭಕ್ತರ ಒತ್ತಾಯಿಸಿದ್ದಾರೆ.

ಭಕ್ತರ ಒತ್ತಾಯ

ಕಾಗನೂರಿನಲ್ಲಿರೊ ಹನುಮ ದೇವಾಲಯದಿಂದ 500 ಮೀಟರ್ ದೂರದಲ್ಲಿನ ಹೇಮಾವತಿ ನದಿ ದಂಡೆಯ ಬಳಿ ಕುರುಹು ಪತ್ತೆಯಾಗಿದೆ.

ಹನುಮ ದೇವಾಲಯ

 ರಾಮನ ಪಾದದ ಗುರುತು, ಹನುಮನ ಹೆಜ್ಜೆಗುರುತು, ಸೀತಾ ರಾಮ -ಲಕ್ಷ್ಮಣರು ಪಗಡೆಯಾಡಿದ್ದ ಪಗಡೆಮಣೆ ಇದಾಗಿದೆ.

ಪಗಡೆಮಣೆ

ಜೈ ಶ್ರೀರಾಮ್ ಎಂದು ಬರೆದಿದ್ದ ಘೋಷಣೆ ಜೊತೆಗೆ ಶಿವಲಿಂಗ ಪೂಜೆ ಮಾಡಲು ಬಂಡೆಗಲ್ಲಿನಲ್ಲೇ ಶಿವಲಿಂಗ ಕೆತ್ತನೆ ಮಾಡಿದ್ದು ಹೀಗೆ ಹಲವು ಕುರುಹುಗಳು ಪತ್ತೆಯಾಗಿದೆ.

ಶಿವಲಿಂಗ 

ಕೊಡಗಿನಲ್ಲಿ ಮೊಟ್ಟ ಮೊದಲ ವಿಶ್ವ ಕೊಡವ ಸಮ್ಮೇಳನ ಆಯೋಜನೆ