ಸಿಲ್ಕ್ಯಾರಾ ಸುರಂಗ ದುರಂತ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ  ಬೆಳಗಾವಿಯ ಇಂಜನಿಯರ್​​ಗಳ ಮಹತ್ವದ ಪಾತ್ರ 

02-Dec-2023

Author: Rakesh Nayak Manchi

Pic: AFP

ಉತ್ತರಾಖಂಡ ರಾಜ್ಯದ ಸಿಲ್ಕ್ಯಾರಾ ಸುರಂಗ ಕುಸಿತಗೊಂಡು 41 ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.

17 ದಿನಗಳ ಕಾಲ ಕಾರ್ಯಾಚರಣೆ ನಡೆಸಿ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

 ಸುರಂಗದಿಂದ ಹೊರಬಂದ ಎಲ್ಲಾ ಕಾರ್ಮಿಕರನ್ನು ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು.

ಹೀಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದಲ್ಲಿ ಬೆಳಗಾವಿ ಇಬ್ಬರು ಇಂಜನಿಯರ್​ಗಳ‌ ಪಾತ್ರವೂ ಮಹತ್ವದ್ದಾಗಿತ್ತು. ಸುರಂಗದಲ್ಲಿ ಕಾರ್ಮಿಕರ ಇರುವಿಕೆಯನ್ನು ಬೆಳಗಾವಿಯ ಬಾಲಚಂದ್ರ ಕಿಲಾರಿ, ದೌದೀಪ್ ಖಂಡ್ರಾ ಅವರು ಗುರುತಿಸಿದ್ದರು.

ರಕ್ಷಣಾ ಕಾರ್ಯ ಆರಂಭಿಸಿದ 7 ದಿನಗಳ ಬಳಿಕ ಕಾರ್ಮಿಕರನ್ನು ಗುರುತಿಸಲಾಗಿತ್ತು. ಎಂಡೋಸ್ಕೋಪಿ ಕ್ಯಾಮರಾ ಮೂಲಕ ಕಾರ್ಮಿಕರ ಇರುವಿಕೆ ಪತ್ತೆಹಚ್ಚಲಾಗಿತ್ತು. ಬೆಳಗಾವಿ ನೀರು ಸರಬರಾಜು ಪೈಪ್ ಲೀಕ್ ಪತ್ತೆಗೆ ಬಳುಸುವ ಕ್ಯಾಮರಾ ಇದಾಗಿದೆ.

ಎಲ್ ಆ್ಯಂಡ್ ಟಿ ಕಂಪನಿ ಬೆಳಗಾವಿ ನಗರದ ನೀರು ಸರಬರಾಜು ಗುತ್ತಿಗೆ ಪಡೆದಿದ್ದು, ಇವರಲ್ಲಿದ್ದ ಕ್ಯಾಮರಾ ಜೊತೆಗೆ ಇಬ್ಬರು ಇಂಜಿನಿಯರ್​ಗಳು ಉತ್ತರಾಖಂಡಗೆ ತೆರಳಿದ್ದರು.

ಕ್ಯಾಮರಾ ಸಹಾಯದಿಂದ ಕಾರ್ಮಿಕರಿಗೆ ಸರ್ಕಾರ ಧೈರ್ಯ ತುಂಬಿತ್ತು. ಬೆಳಗಾವಿ ಇಬ್ಬರು ಇಂಜಿನಿಯರ್​ಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಬೆಳಗಾವಿಯ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ರಾಜು ಸೇಠ್ ಅವರು ಈ ಇಬ್ಬರನ್ನು ಸನ್ಮಾನಿಸಿದರು.