03 June 2024

ಏರಿಕೆಯಾಗುತ್ತಾ ನಂದಿನಿ ಹಾಲಿನ ಬೆಲೆ?

Pic Credit -Pintrest

Author :Akshatha Vorkady

ಹಾಲಿನ ಬೆಲೆ ಏರಿಕೆ 

ಅಮುಲ್​ ಹಾಗೂ ದೆಹಲಿಯಲ್ಲಿ ಮದರ್ ಡೈರಿ  ಹಾಲಿನ ಬೆಲೆ ಏರಿಕೆ ಮಾಡಿದೆ.

Pic Credit -Pintrest

ಕರ್ನಾಟಕದಲ್ಲಿ ಆತಂಕ

ದೇಶದಾದ್ಯಂತ ಸಹಕಾರಿ ಹಾಲು ಒಕ್ಕೂಟ ಬೆಲೆ ಏರಿಕೆಗೆ ಮುಂದಾಗಿದ್ದು, ಇದೀಗ ಕರ್ನಾಟಕದಲ್ಲಿ ಆತಂಕ ಸೃಷ್ಟಿಸಿದೆ. 

Pic Credit -Pintrest

ನಂದಿನಿ ಹಾಲಿನ ಬೆಲೆ

ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಕೂಡ ಏರಿಕೆಯಾಗಬಹುದೇ ಎಂಬ ಆತಂಕದಲ್ಲಿದ್ದಾರೆ ಗ್ರಾಹಕರು. 

Pic Credit -Pintrest

ಲೀಟರ್‌ಗೆ 2 ರೂಪಾಯಿ

ಮದರ್ ಡೈರಿಯು ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ದರದಲ್ಲಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ. 

Pic Credit -Pintrest

ಮದರ್ ಡೈರಿ

ಉತ್ಪಾದನಾ ವೆಚ್ಚ ಸರಿದೂಗಿಸಲು ಹಾಲಿನ ಬೆಲೆ ಲೀಟರ್‌ಗೆ 2 ರೂ. ಹೆಚ್ಚಿಸಲಾಗುತ್ತಿದೆ ಎಂದು ಮದರ್ ಡೈರಿ ಹೇಳಿದೆ.

Pic Credit -Pintrest

ಅಮುಲ್​ ಕಂಪನಿ

ಅಮುಲ್​ ಕಂಪನಿಯು ಹಾಲಿನ ಬೆಲೆ ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿ ಸೋಮವಾರ ಬೆಳಗ್ಗೆ ಪ್ರಕಟಣೆ ಹೊರಡಿಸಿತ್ತು.

Pic Credit -Pintrest

ಪ್ರತಿ ಲೀಟರ್​ಗೆ 3 ರೂ.

ಕಳೆದ ವರ್ಷ ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಕೆಎಂಎಫ್​​​  ಪ್ರತಿ ಲೀಟರ್​ಗೆ 3 ರೂ. ಹೆಚ್ಚಳ ಮಾಡಿತ್ತು. 

Pic Credit -Pintrest

ನಂದಿನಿ ಹಾಲಿನ ದರ 

ಸದ್ಯ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಿಲ್ಲ ಮತ್ತು ಹಿಂದಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.

Pic Credit -Pintrest

ಅಧಿಕಾರಿ ರಘುನಂದನ್

ನಂದಿನಿ ಹಾಲಿನ ದರ ಹೆಚ್ಚಳ ಪ್ರಸ್ತಾಪ ಸದ್ಯಕ್ಕೆಇಲ್ಲ ಎಂದು ಕೆಎಂಎಫ್​ನ ಮಾರುಕಟ್ಟೆ ಅಧಿಕಾರಿ ರಘುನಂದನ್ ತಿಳಿಸಿದ್ದಾರೆ.

Pic Credit -Pintrest