23-09-2023

ಧೋನಿ, ಕೊಹ್ಲಿಗೂ ಸಾಧ್ಯವಾಗಿಲ್ಲ: ರಾಹುಲ್ ವಿಶೇಷ ದಾಖಲೆ

ಭಾರತ-ಆಸ್ಟ್ರೇಲಿಯಾ

ಮೊಹಾಲಿಯ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟುಗಳ ಭರ್ಜರಿ ಜಯ ಸಾಧಿಸಿತು.

ರಾಹುಲ್ ಸಾಧನೆ

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತ ಕೆಎಲ್ ರಾಹುಲ್, ಈ ಪಂದ್ಯದಲ್ಲಿ ಗೆಲುವಿನ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

1996ರ ಬಳಿಕ ಗೆಲುವು

1996 ರ ಬಳಿಕ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸಾಧಿಸಿದ ಮೊದಲ ಏಕದಿನ ಗೆಲುವು ಇದಾಗಿದೆ.

ಧೋನಿ-ಕೊಹ್ಲಿಗೆ ಸೋಲು

ರಾಹುಲ್‌ಗಿಂತ ಮೊದಲು, ಧೋನಿ ಮತ್ತು ವಿರಾಟ್ ಮೊಹಾಲಿಯಲ್ಲಿ ನಡೆದ ಏಕದಿನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವನ್ನು ಮುನ್ನಡೆಸಿದ್ದಾರೆ. ಆದರೆ ಗೆಲುವು ಕಾಣಲಿಲ್ಲ.

ಆಸೀಸ್ 276 ರನ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 276 ರನ್​ಗಳಿಗೆ ಆಲೌಟ್ ಆಯಿತು. ವಾರ್ನರ್ 51 ರನ್ ಸಿಡಿಸಿದರು.

ಭಾರತ 281 ರನ್

ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 48.4 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281 ರನ್ ಸಿಡಿಸಿ ಭರ್ಜರಿ ಜಯ ಕಂಡಿತು.

4 ಅರ್ಧಶತಕ

ಭಾರತ ಪರ ಗಿಲ್ 74, ಗಾಯಕ್ವಾಡ್ 71, ಕೆಎಲ್ ರಾಹುಲ್ ಅಜೇಯ 58 ಹಾಗೂ ಸೂರ್ಯಕುಮಾರ್ ಯಾದವ್ 50 ರನ್ ಬಾರಿಸಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.

ಶಮಿ 5 ವಿಕೆಟ್

ಭಾರತ ಪರ ಮೊಹಮ್ಮದ್ ಶಮಿ ಕಾಂಗರೂ ಪಡೆಯ 5 ವಿಕೆಟ್ ಕಿತ್ತು ಮಿಂಚಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.

ಕೌಂಟಿ ಚಾಂಪಿಯನ್ಶಿಪ್​ನಲ್ಲಿ ಉಮೇಶ್ ಯಾದವ್ ಸ್ಫೋಟಕ ಬ್ಯಾಟಿಂಗ್