ಜಗತ್ತಿನ 100 ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಬೆಂಗಳೂರಿನ ಎಂಟಿಆರ್
ಗೂ ಸ್ಥಾನ!
ಜಗತ್ತಿನ 100 ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಬೆಂಗಳೂರಿನ ಎಂಟಿಆರ್
ಗೂ ಸ್ಥಾನ!
04 ಜನವರಿ 2024
Author: Sushma Chakre
ಜಗತ್ತಿನ ಅತ್ಯುತ್ತಮವಾದ 100 ಜನಪ್ರಿಯ ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಭಾರತದ 6 ರೆಸ್ಟೋರೆಂಟ್ಗಳು ಸ್ಥಾನ ಪಡೆದಿವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
6 ಭಾರತೀಯ ರೆಸ್ಟೋರೆಂಟ್
ಪ್ಯಾರಾಗಾನ್ ರೆಸ್ಟೋರೆಂಟ್ ಅತ್ಯುತ್ತಮ ಭಾರತೀಯ ರೆಸ್ಟೋರೆಂಟ್ ಆಗಿದೆ. ಇದು ವಿಶ್ವದ ಬೆಸ್ಟ್ ರೆಸ್ಟೋರೆಂಟ್
ಗಳ ಪೈಕಿ 5ನೇ ಸ್ಥಾನದಲ್ಲಿದೆ. ಇದು ಅತ್ಯಂತ ಸಾಂಪ್ರದಾಯಿಕ ಬಿರಿಯಾನಿಗೆ ಜನಪ್ರಿಯವಾಗಿದೆ. ಪನೀರ್ ಟಿಕ್ಕಾ ಇಲ್ಲಿನ ಮತ್ತೊಂದು ಬೆಸ್ಟ್ ತಿನಿಸು.
ಕೇರಳದ ಪ್ಯಾರಾಗಾನ್ ರೆಸ್ಟೋರೆಂಟ್
ಇದು ವಿಶ್ವದ ಟಾಪ್ ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. ಇದು ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯ ರೆಸ್ಟೋರೆಂಟ್ ಆಗಿದೆ. ನುಣ್ಣಗೆ ರುಬ್ಬಿದ ಕೀಮಾದಿಂದ ಮಾಡಿದ ಗಲೌಟಿ ಕಬಾಬ್‌ಗೆ ಇದು ಹೆಸರುವಾಸಿಯಾಗಿದೆ.
ಲಕ್ನೋದ ಟುಂಡೆ ಕಬಾಬಿ
ಪೀಟರ್ ಕ್ಯಾಟ್ ಕಬಾಬ್‌ಗೆ ಬಹಳ ಪ್ರಸಿದ್ಧಿ ಪಡೆದಿದ್ದು, ಜಗತ್ತಿನ ಟಾಪ್ ರೆಸ್ಟೋರೆಂಟ್ಗಳ ಪೈಕಿ 10ನೇ ಸ್ಥಾನದಲ್ಲಿದೆ. ಇಲ್ಲಿನ ಚೆಲೋ ಕಬಾಬ್‌ಗ ಇರಾನಿನ ಬೀಫ್ ಕಬಾಬ್‌ನ ಹೊಸ ಆವಿಷ್ಕಾರವಾಗಿದೆ. ಇಲ್ಲಿ ಬೀಫ್ ಬದಲಾಗಿ ಮಟನ್ ಮತ್ತು ಚಿಕನ್ ಅನ್ನು ಬಳಸಲಾಗುತ್ತದೆ.
ಕೋಲ್ಕತ್ತಾದ ಪೀಟರ್ ಕ್ಯಾಟ್
ಕರ್ನಾಟಕದ ಬೆಂಗಳೂರಿನಲ್ಲಿರುವ ಮಾವಳ್ಳಿ ಟಿಫಿನ್ ರೂಮ್ಸ್ (ಎಂಟಿಆರ್) ಬಹಳ ಜನಪ್ರಿಯ ಭಾರತೀಯ ರೆಸ್ಟೋರೆಂಟ್ ಆಗಿದೆ. ಬಿಸಿ ಬೇಳೆ ಬಾತ್ ಮತ್ತು ರುಚಿಕರವಾದ ರವೆ ಇಡ್ಲಿಗೆ ಎಂಟಿಆರ್ ಪ್ರಸಿದ್ಧಿ ಪಡೆದಿದೆ.
ಬೆಂಗಳೂರಿನ ಎಂಟಿಆರ್
ಈ ರೆಸ್ಟೋರೆಂಟ್ ಜಗತ್ತಿನ ಬೆಸ್ಟ್ ರೆಸ್ಟೋರೆಂಟ್ಗಳ ಪೈಕಿ 84ನೇ ಸ್ಥಾನದಲ್ಲಿದೆ. ಇದು ಮಟನ್ ಕೂರ್ಮಾಕ್ಕೆ ಜನಪ್ರಿಯವಾಗಿದೆ. ಇದು ಇಲ್ಲಿನ ರುಚಿಕರವಾದ ಭಕ್ಷ್ಯವಾಗಿದೆ. ಮೊಸರು, ಮಸಾಲೆಗಳು ಮತ್ತು ತುಪ್ಪದೊಂದಿಗೆ ಮಟನ್ ಅನ್ನು ನಿಧಾನವಾಗಿ ಬೇಯಿಸಿ ಕೂರ್ಮಾ ತಯಾರಿಸಲಾಗುತ್ತದೆ.
ದೆಹಲಿಯ ಕರೀಂ
ಆಲೂ ಪರಾಟಕ್ಕೆ ಹೆಸರುವಾಸಿಯಾದ ಅಮ್ರಿಕ್ ಸುಖದೇವ್ ಧಾಬಾ ಹರಿಯಾಣದ ಮುರ್ತಾಲ್‌ನಲ್ಲಿದೆ. ಇದು ಜಗತ್ತಿನ ಟಾಪ್ ರೆಸ್ಟೋರೆಂಟ್ಗಳ ಪೈಕಿ 16ನೇ ಸ್ಥಾನ ಪಡೆದಿದೆ. ಇದು ಬಾಯಲ್ಲಿ ನೀರೂರಿಸುವ ಚೋಲೆ ಬತುರೆಗೆ ಹೆಸರುವಾಸಿಯಾಗಿದೆ.