27 July 2024
Author : Akshatha Vorkady
Pic credit - Google
ಇತ್ತೀಚಿನ ದಿನಗಳಲ್ಲಿ ಬಹುತೇಕ ಕಣ್ಮರೆಯಾಗುತ್ತಿರುವ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಪ್ರತೀಕ 'ಆಟಿಕಳೆಂಜ'.
Pic credit - Google
ಆಟಿ ಕಳೆಂಜ ತುಳುನಾಡಿನ ಪುರಾತನ ಸಾಂಪ್ರದಾಯಿಕ ಜಾನಪದ ಕಲೆಯಾಗಿದ್ದು, ಆಷಾಢ ಮಾಸದಲ್ಲಿ ನಡೆಸಲಾಗುತ್ತದೆ.
Pic credit - Google
ಆಷಾಢ ಮಾಸವನ್ನು ತುಳುವಿನಲ್ಲಿ ಆಟಿ ತಿಂಗಳು ಎಂದು ಕರೆಯುತ್ತಾರೆ. ಕಳೆಂಜ ಅಂದ್ರೆ ಕಳೆಯುವವನು ಎಂದರ್ಥ.
Pic credit - Google
ಆಷಾಢ ಮಾಸದಲ್ಲಿ ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲದಲ್ಲಿ ಎಲ್ಲ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ.
Pic credit - Google
ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ.
Pic credit - Google
ಆಟಿ ಕಳಂಜ ಮನೆ ಬಾಗಿಲಿಗೆ ಬಂದರೆ ಮನೆಯೊಡತಿ ಭತ್ತ, ಅಕ್ಕಿ, ಮೆಣಸು, ಉಪ್ಪು, ಹುಳಿ, ಮುಂತಾದವುಗಳನ್ನು ಕೊಟ್ಟು ಸತ್ಕರಿಸಬೇಕು.
Pic credit - Google
ಆಟಿ ಕಳಂಜ ಊರಿಗೆ ಅಂಟಿದ ರೋಗ ರುಜಿನಗಳನ್ನು ನಿವಾರಿಸುವ ಮಾಂತ್ರಿಕ ಎಂಬ ನಂಬಿಕೆ ತುಳುನಾಡಿನಲ್ಲಿದೆ.
Pic credit - Google