ಆಲೂ ಬೋಂಡಾ ಮಾಡುವುದು ಹೇಗೆ?

8 January 2025

Pic credit - Pintrest

Sainanda

ಎಣ್ಣೆಯಲ್ಲಿ ಕರಿದ ಗರಿಗರಿಯಾದ ತಿಂಡಿಯೆಂದರೆ ಎಲ್ಲರಿಗೂ ಕೂಡ ಇಷ್ಟನೇ. ಸಂಜೆ ಕಾಫಿ ಹಾಗೂ ಟೀಗೆ ಕರಿದ ತಿಂಡಿ ಇದ್ದರೆ ಅದರ ಮಜಾನೇ ಬೇರೆ.

Pic credit - Pintrest

ದಕ್ಷಿಣ ಭಾರತದ ಫೇಮಸ್ ತಿಂಡಿಗಳಲ್ಲಿ ಆಲೂ ಬೋಂಡಾ ಕೂಡ ಒಂದು. ರುಚಿಕರವಾದ ಆಲೂಗಡ್ಡೆ ಬೋಂಡಾ ಈ ರೀತಿ ಮಾಡಿದ್ರೆ ರುಚಿ ಮಾತ್ರ ಅದ್ಭುತ.

Pic credit - Pintrest

ಮೊದಲಿಗೆ ಬೇಯಿಸಿ, ಸಿಪ್ಪೆ ತೆಗೆದುಕೊಂಡ ಆಲೂಗಡ್ಡೆಯನ್ನು ಪಾತ್ರೆಗೆ ಹಾಕಿ ಕಿವುಚಿಕೊಳ್ಳಿ.

Pic credit - Pintrest

 ಒಂದು ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಇಂಗು, ಹಸಿಮೆಣಸಿನ ಕಾಯಿ,  ಉಪ್ಪು ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.

Pic credit - Pintrest

ಕಿವುಚಿಟ್ಟ ಆಲೂಗಡ್ಡೆಯನ್ನು ಸೇರಿಸಿಕೊಳ್ಳಿ. ಇದಕ್ಕೆ ಅರಿಶಿನ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ, ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ.

Pic credit - Pintrest

ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, 1 ಟೀ ಚಮಚ ಉಪ್ಪು, ಚಿಟಿಕೆ ಅರಿಶಿನ, ಚಿಟಿಕೆ ಖಾರದ ಪುಡಿ, ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಿ.

Pic credit - Pintrest

ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾಗಲು ಇಡಿ, ಆ ಬಳಿಕ ಆಲೂಗಡ್ಡೆಯ ಉಂಡೆಯನ್ನು ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿದರೆ ಬೋಂಡಾ ಸವಿಯಲು ಸಿದ್ಧ.

Pic credit - Pintrest

7 ಹಣ್ಣುಗಳ ಸಿಪ್ಪೆ ತ್ವಚೆಗೆ ಕಾಂತಿ