ದಿನದ ಬಹುಪಾಲು ಸಮಯವನ್ನು ನಿದ್ರೆಯಲ್ಲೇ ಕಳೆಯುವ  ಪ್ರಾಣಿಗಳಿವು

12 Dec 2023

Author: Malashree Anchan

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂಬ ಗಾದೆಯಿದೆ, ಆ ಗಾದೆಗೆ ಸೂಕ್ತವೆಂಬಂತೆ ದಿನದ ಬಹುಪಾಲು ನಿದ್ರೆ ಮಾಡುವುದರಲ್ಲಿಯೇ ಸಮಯ ಕಳೆಯುವ ಕೆಲವು ಪ್ರಾಣಿಗಳಿವೆ. 

ನೋಡಲು ತುಂಬಾ ಮುದ್ದಾಗಿರುವ ಈ ಪ್ರಾಣಿಗಳು ಎರಡರಿಂದ ಆರು ಗಂಟೆಗಳ ಕಾಲ ಮಾತ್ರ ಎಚ್ಚರವಾಗಿರುತ್ತದೆ. ಇವುಗಳು ದಿನದ 22 ಗಂಟೆಗಳ ಕಾಲ ನಿದ್ರಿಸುತ್ತವೆ.

ಕೋಲಾ

ಅತ್ಯಂತ ಸೋಮಾರಿ ಪ್ರಾಣಿ ಎಂದೇ ಹೆಸರುವಾಸಿಯಾಗಿರುವ ಈ ಪ್ರಾಣಿಗಳು ದಿನದ 15 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ.

ಸ್ಲೋತ್

ದಕ್ಷಿಣ ಅಮೇರಿಕಾ ಮತ್ತು ಉತ್ತರ ಅರ್ಜೆಂಟೀನಾದಲ್ಲಿ ಕಂಡುಬರುವ  ಈ ಪ್ರಾಣಿಗಳು ದಿನಕ್ಕೆ 18 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಮತ್ತು ಇವು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ.

ಅರ್ಮಡಿಲೊ

ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಸಕ್ರಿಯವಾಗಿರುತ್ತವೆ. ಮತ್ತು ಇವುಗಳು ದಿನಕ್ಕೆ 18 ಗಂಟೆಗಳ ಕಾಲ ನಿದ್ರಿಸುತ್ತವೆ.  

ಒಪೊಸಮ್

ಬಾವಲಿಗಳು ಹೆಚ್ಚಾಗಿ ರಾತ್ರಿಯಲ್ಲಿ ಸಕ್ರಿಯವಾಗಿರುತ್ತವೆ. ಮತ್ತು ತಮ್ಮ ಆಹಾರವನ್ನು ಹುಡುಕುತ್ತವೆ. ಇವುಗಳು ಸಂಪೂರ್ಣ ಹಗಲು ಹೊತ್ತನ್ನು ನಿದ್ರೆಯಲ್ಲೇ ಕಳೆಯುತ್ತವೆ.

ಬಾವಲಿಗಳು

ಪ್ರಪಂಚದಾದ್ಯಂತ 2500 ಜಾತಿಯ ಹಾವುಗಳಿವೆ. ಅವುಗಳಲ್ಲಿ ಅಪಾಯಕಾರಿಯಾದ ಹಾವುಗಳಲ್ಲಿ ಹೆಬ್ಬಾವು ಕೂಡಾ ಒಂದು. ಇವುಗಳು ದಿನದ 18 ಗಂಟೆಗಳನ್ನು ನಿದ್ರೆಯಲ್ಲೇ ಕಳೆಯುತ್ತವೆ.

ಹೆಬ್ಬಾವು