ಮಹಿಳೆಯರ ಮುಖದ ಮೇಲೆ ಮೂಡುವ ಅನಗತ್ಯ ಕೂದಲು ನಿವಾರಣೆಗೆ ಮನೆಮದ್ದು
ಟಿಪ್ಸ್
ಪುರುಷರಂತೆ ಮಹಿಳೆಯರಿಗೂ ಮುಖದ ಮೇಲೆ ಕೂದಲು ಬೆಳೆಯುತ್ತೆ. ಇದರಿಂದ ಮುಜುಗರ ಬೇಡ, ಪಾರ್ಲರ್ಗೂ ಹೋಗಬೇಕಿಲ್ಲ. ಇಲ್ಲಿದೆ ಕೆಲವು ಟಿಪ್ಸ್
ಮುಖದ ಮೇಲೆ ಕೂದಲು
ಹಾರ್ಮೋನುಗಳ ಅಸಮತೋಲನ ಅಥವಾ ವಯಸ್ಸಿನ ಕಾರಣದಿಂದಾಗಿ ಮಹಿಳೆಯರ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತವೆ.
ಅರಿಶಿನ ಮತ್ತು ಹಾಲು
ಅರಿಶಿನದೊಂದಿಗೆ ಹಾಲು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಅದು ಮುಖದ ಮೇಲೆ ಕೂದಲು ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪೀಡಿತ ಪ್ರದೇಶಕ್ಕೆ ಈ ಪೇಸ್ಟ್ ಹಚ್ಚಿ, 15-20 ನಿಮಿಷ ಬಿಟ್ಟು ತೊಳೆಯಬೇಕು.
ಲ್ಯಾವೆಂಡರ್ ಆಯಿಲ್ ಮತ್ತು ಟೀ ಟ್ರೀ ಆಯಿಲ್
ಎಣ್ಣೆಯ ಕೆಲವು ಹನಿಗಳನ್ನು ಕ್ಯಾರಿಯರ್ ಎಣ್ಣೆಯಿಂದ ದುರ್ಬಲಗೊಳಿಸಿ, ಪೀಡಿತ ಪ್ರದೇಶಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಬೇಕು. ಲ್ಯಾವೆಂಡರ್ ಮತ್ತು ಟೀ ಟ್ರೀ ಎಣ್ಣೆಗಳು ಆಂಟಿ-ಆಂಡ್ರೊಜೆನಿಕ್ ಗುಣಲಕ್ಷಣಗಳನ್ನು ಹೊಂದಿವೆ.
ಪಪ್ಪಾಯಿ ಮತ್ತು ಅರಿಶಿನ ಮಾಸ್ಕ್
ಪಪ್ಪಾಯದಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಬೇಕು. 15-20 ನಿಮಿಷದ ಬಳಿಕ ನೀರಿನಿಂದ ತೊಳೆಯಬೇಕು.
ಮೊಟ್ಟೆ
ಮೊಟ್ಟೆಯ ಬಿಳಿಭಾಗ, ಸಕ್ಕರೆ ಮತ್ತು ಕಾರ್ನ್ ಫ್ಲೋರ್ ಬಳಸಿ ಮಾಸ್ಕ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ ಒಣಗಿಸಿ ಸಿಪ್ಪೆ ತೆಗೆಯಬೇಕು. ಇದು ಮುಖದ ಕೂದಲನ್ನು ತೆಗೆದುಹಾಕಲು ಸಹಕಾರಿ.
ಓಟ್ಸ್ ಮತ್ತು ಬಾಳೆಹಣ್ಣು
ಓಟ್ ಮೀಲ್ ಮತ್ತು ಬಾಳೆಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.
ಸಕ್ಕರೆ ಮತ್ತು ನಿಂಬೆ
ನಿಂಬೆ ರಸದಲ್ಲಿ ಸಕ್ಕರೆ ಬೆರೆಸಿ ಅದನ್ನು ಮುಖದ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸಕ್ಕರೆ ಮತ್ತು ನಿಂಬೆ ರಸ ಸ್ಕ್ರಬ್ ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ.