Author: Sushma Chakre

ತ್ವಚೆಯ ಆರೈಕೆಗೆ ಲಿಚಿಯನ್ನು ಹೇಗೆ ಬಳಸಬಹುದು?

07 Dec 2023

ಲಿಚಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳ ಜೊತೆಗೆ ವಿಟಮಿನ್‌ಗಳು, ಮೆಗ್ನೀಸಿಯಮ್, ರಂಜಕ, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದಂತಹ ಖನಿಜಗಳು ನಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಪ್ರಯೋಜನಕಾರಿಯಾಗಿದೆ.

ಲಿಚಿ ಹಣ್ಣಿನಿಂದ ಆರೋಗ್ಯ ವೃದ್ಧಿ

ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಲಿಚಿ ಸಾರವು ಸೂರ್ಯನಿಂದ ಬರುವ UV ವಿಕಿರಣದ ಹಾನಿಕಾರಕ ಪರಿಣಾಮಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

ಸೂರ್ಯನ ವಿಕಿರಣದಿಂದ ರಕ್ಷಣೆ

ಲಿಚಿ ಹಣ್ಣಿನ ತಿರುಳನ್ನು ತೆಗೆದು ಅದರಿಂದ ರಸ ಹಿಂಡಿಕೊಳ್ಳಿ. ಈ ರಸಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್‌ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

ಸನ್ ಬರ್ನ್

ಹತ್ತಿ ಉಂಡೆಯಿಂದ ಸನ್​ಬರ್ನ್ ಆದ ಜಾಗಕ್ಕೆ ಇದನ್ನು ಹಚ್ಚಿರಿ. ಬಳಿಕ, ಅರ್ಧ ಗಂಟೆ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಸನ್ ಬರ್ನ್ಸ್ ಸಂಪೂರ್ಣವಾಗಿ ವಾಸಿಯಾಗುವವರೆಗೆ ಇದನ್ನು ಪ್ರತಿದಿನಕ್ಕೊಮ್ಮೆ ಬಳಸುತ್ತಿರಿ.

ದಿನಕ್ಕೊಮ್ಮೆ ಈ ರೀತಿ ಮಾಡಿ

4 ರಿಂದ 5 ಲಿಚಿಗಳ ತಿರುಳಿನಿಂದ ರಸವನ್ನು ಹೊರತೆಗೆಯಿರಿ. ಈ ಮಿಶ್ರಣಕ್ಕೆ ಲ್ಯಾವೆಂಡರ್ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿ.

ಆರೋಗ್ಯಕರ ಚರ್ಮಕ್ಕೆ ಹೀಗೆ ಮಾಡಿ

ಈ ಮಿಶ್ರಣವನ್ನು ನಿಮ್ಮ ಮುಖ, ಕುತ್ತಿಗೆ ಅಥವಾ ಹೈಪರ್‌ಪಿಗ್ಮೆಂಟೇಶನ್‌ನಿಂದ ಪ್ರಭಾವಿತವಾಗಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಬಿಡಿ. ಬಳಿಕ ನಿಮ್ಮ ಮುಖವನ್ನು ಒರೆಸಲು ತಣ್ಣೀರಿನಲ್ಲಿ ಅದ್ದಿದ ಸ್ವಚ್ಛವಾದ ಹತ್ತಿ ಟವೆಲ್ ಬಳಸಿ.

ಮುಖಕ್ಕೆ ಹಚ್ಚಿಕೊಳ್ಳಿ

ಮೊಡವೆಗಳನ್ನು ತೆಗೆಯಲು ನೀವು ಲಿಚಿಯ ತಾಜಾ ರಸವನ್ನು ಬಳಸಬಹುದು ಅಥವಾ ಲಿಚಿ ತಿರುಳು ಮತ್ತು ಸ್ವಲ್ಪ ಮೊಸರು ಜೊತೆ ಫೇಸ್​ಪ್ಯಾಕ್ ಮಾಡಬಹುದು. ಮೊಡವೆ ಇರುವ ಜಾಗದ ಮೇಲೆ ಇದನ್ನು ಹಚ್ಚಿ, ಸ್ವಲ್ಪ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ.

ಮೊಡವೆಗೆ ಗುಡ್​ಬೈ ಹೇಳಿ