ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ನೀವು ಕಳೆದುಹೋಗ್ತೀರಾ

16 December 2024

Pic credit - Pintrest

Sainanda

ಕರಾವಳಿಯಿಂದ ಹಿಡಿದು ಸಹ್ಯಾದ್ರಿ ಬೆಟ್ಟಗಳ ಸಾಲುಗಳವರೆಗೂ ನೋಡಲೇಬೇಕಾದ ತಾಣಗಳೂ ಕರ್ನಾಟಕದಲ್ಲಿದ್ದು, ಇಲ್ಲಿಗೆ ದೇಶ ವಿದೇಶಗಳಿಂದ  ಪ್ರವಾಸಿಗರು ಆಗಮಿಸುತ್ತಾರೆ.

Pic credit - Pintrest

ಹಂಪಿಯು ಐತಿಹಾಸಿಕ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ. ಇದು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವ, ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿದೆ.

Pic credit - Pintrest

ಗೋಕರ್ಣವು ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಒಂದಾಗಿದ್ದು, ಪ್ರಶಾಂತವಾದ ಸಮುದ್ರತೀರಗಳು ಪ್ರವಾಸಿಗರನ್ನು ಆಕರ್ಷಿಸದೇ ಇರದು.

Pic credit - Pintrest

ಮೈಸೂರು ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಅರಮನೆಗಳು, ವಸ್ತು ಸಂಗ್ರಹಾಲಯಗಳು, ಪಾರಂಪರಿಕ ರಚನೆಗಳು ಪ್ರವಾಸಿಗರಿಗೆ ಹತ್ತಿರವಾಗಿದೆ.

Pic credit - Pintrest

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟದ ತುದಿಯಲ್ಲಿ ನಿಂತು ಪ್ರಾಚೀನ ಸರೋವರಗಳು, ಸ್ಮಾರಕಗಳು ಮತ್ತು ದೇವಾಲಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

Pic credit - Pintrest

ಉಡುಪಿ ಜಿಲ್ಲೆಯು ದೇವಾಲಯಗಳು ಮತ್ತು ಆಹಾರಗಳಿಗೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಶ್ರೀ ಕೃಷ್ಣ ದೇವಾಲಯ, ಕೊಲ್ಲೂರು, ಮಲ್ಪೆ ಬೀಚ್ ಸೇರಿದಂತೆ ಆಕರ್ಷಕ ತಾಣಗಳು ಇಲ್ಲಿವೆ.

Pic credit - Pintrest

ಮಡಿಕೇರಿಯು ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ಜಲಪಾತಗಳು, ಪರ್ವತಗಳು, ಚಹಾ ಮತ್ತು ಕಾಫಿ ತೋಟಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

Pic credit - Pintrest

ಸೌತ್ ಇಂಡಿಯನ್ ಟೇಸ್ಟಿ ಎಗ್ ಬುರ್ಜಿ ಮಾಡೋದು ಹೇಗೆ? ಇಲ್ಲಿದೆ ವಿಧಾನ