ಸೌತ್ ಇಂಡಿಯನ್ ಟೇಸ್ಟಿ ಎಗ್ ಬುರ್ಜಿ ಮಾಡೋದು ಹೇಗೆ? ಇಲ್ಲಿದೆ ವಿಧಾನ
12 December 2024
Pic credit - Pintrest
Sainanda
ಹೆಚ್ಚಿನವರಿಗೆ ಊಟದ ಜೊತೆಗೆ ಏನಾದರೂ ಸೈಡ್ ಡಿಶ್ ಇರಲೇ ಬೇಕು, ಅದರಲ್ಲಿ ಮಸಾಲೆ ಮಿಶ್ರಿತ ಮೊಟ್ಟೆ ಬುರ್ಜಿ ಇದ್ದು ಬಿಟ್ಟರೆ ಮಜಾನೇ ಬೇರೆ.
Pic credit - Pintrest
ದಕ್ಷಿಣ ಭಾರತದ ಶೈಲಿಯಲ್ಲಿ ರುಚಿಕರವಾದ ಎಗ್ ಬುರ್ಜಿಯನ್ನು ಮಾಡುವುದು ಎಷ್ಟು ಸುಲಭವೋ, ರುಚಿಯು ಅಷ್ಟೇ ಅದ್ಭುತ.
Pic credit - Pintrest
ಮೊದಲಿಗೆ, ಈರುಳ್ಳಿ ಮತ್ತು ಟೊಮೆಟೊವನ್ನು ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ. ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಒಡೆದು, ಉಪ್ಪು ಹಾಗೂ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿಟ್ಟುಕೊಳ್ಳಿ.
Pic credit - Pintrest
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
Pic credit - Pintrest
ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದೆರಡು ನಿಮಿಷ ಬೇಯಿಸಿಕೊಳ್ಳಿ.
Pic credit - Pintrest
ತದನಂತರ ಕಲಸಿಟ್ಟ ಮೊಟ್ಟೆ, ಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ ಬೇಯಿಸಿಕೊಳ್ಳಿ.
Pic credit - Pintrest
ಕೊನೆಯದಾಗಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಎಗ್ ಬುರ್ಜಿ ಸವಿಯಲು ಸಿದ್ಧ.
Pic credit - Pintrest
ಈ ಐದು ತರಕಾರಿಯನ್ನು ನಿತ್ಯ ಸೇವಿಸಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಿ