ಚಂದ್ರನಲ್ಲಿ ನೀರು ಇರುವುದು ದೃಢಪಟ್ಟಿದೆ. ಈಗ ಸೋಮನ ಅಂಗಳದಲ್ಲಿ ಗುಹೆಯೂ ಇರುವುದು ಗೊತ್ತಾಗಿದೆ. ಇದು ವಿಜ್ಞಾನಿಗಳಿಗೆ ಹೊಸ ಹುಮ್ಮಸ್ಸು, ಭರವಸೆ ನೀಡಿದೆ.
Pic credit: Google
ಕುತೂಹಲ ಎಂದರೆ 1969ರ ಜುಲೈ 20ರಂದು ಮನುಷ್ಯ ಮೊದಲ ಬಾರಿಗೆ ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದ. ಆ ಐತಿಹಾಸಿಕ ಜಾಗದಿಂದ 400 ಕಿಮೀ ದೂರದಲ್ಲಿ ಈಗ ಗುಹೆ ಪತ್ತೆಯಾಗಿರುವುದು.
Pic credit: Google
ಈ ಗುಹೆ ಲಕ್ಷಾಂತರ ಕೋಟಿ ವರ್ಷಗಳ ಹಿಂದೆ ಹರಿಯುತ್ತಿದ್ದ ಲಾವಾರಸದಿಂದ ನಿರ್ಮಾಣ ಆಗಿರಬಹುದು. ಇಂಥ ಹಲವು ಕುಳಿ ಮತ್ತು ಗುಹೆಗಳು ಚಂದ್ರನ ಅಂಗಳದಲ್ಲಿ ಇರಬಹುದು.
Pic credit: Google
ಚಂದ್ರನಲ್ಲಿ ಕುಳಿಗಳಿರುವುದು ಎಲ್ಲರಿಗೂ ಗೊತ್ತು. ಆದರೆ, ಗುಹೆ ಅಸ್ತಿತ್ವ ದೃಢಪಟ್ಟಿರಲಿಲ್ಲ. ಈಗ ಅದು ಖಚಿತಪಟ್ಟಿರುವುದು ಹೊಸ ಆಲೋಚನೆಗೆ ಎಡೆ ಮಾಡಿದೆ.
Pic credit: Google
ಈಗ ಪತ್ತೆಯಾಗಿರುವ ಗುಹೆ 45 ಮೀಟರ್ ಅಗಲ, 80 ಮೀಟರ್ ಉದ್ದ ಇದೆ. 14 ಟೆನಿಸ್ ಅಂಗಳಗಳನ್ನು ಒಟ್ಟಿಗೆ ಸೇರಿಸಿದರೆ ಆಗುವ ಜಾಗದಷ್ಟು ವಿಸ್ತೀರ್ಣತೆ ಇದೆ. ಇಂಥ ನೂರಾರು ಗುಹೆಗಳು ವಿವಿಧೆಡೆ ಇವೆ.
Pic credit: Google
ಚಂದ್ರನ ಮೇಲ್ಮೈನಲ್ಲಿ ಮಾರಕ ವಾತಾವರಣ ಇದೆ. ಭೂಮಿಯಲ್ಲಿ ಓಝೋನ್ ಪದರ ಸೂರ್ಯನ ಕಿರಣವನ್ನು ಫಿಲ್ಟರ್ ಮಾಡುವಂತೆ ಚಂದ್ರನಲ್ಲಿ ಇಲ್ಲ. ಹೀಗಾಗಿ ಮನುಷ್ಯ ಅಲ್ಲಿ ಇರಲು ಆಗಲ್ಲ.
Pic credit: Google
ಗುಹೆಯೊಳಗೆ ಈ ಮಾರಕ ವಿಕಿರಣ ಇತ್ಯಾದಿಯಿಂದ ರಕ್ಷಣೆ ಪಡೆಯಬಹುದು. ಚಂದ್ರನಲ್ಲಿ ಹೋಗುವ ಗಗನಯಾತ್ರಿಗಳು ಈ ಗುಹೆಯೊಳಗೆ ಇರಬಹುದು. ಹಾಗೊಂದು ಕಲ್ಪನೆಯಲ್ಲಿ ವಿಜ್ಞಾನಿಗಳಿದ್ದಾರೆ.