coffee face mask

Author: Sushma Chakre

ಚರ್ಮ ಸುಕ್ಕುಗಟ್ಟದಂತೆ ತಡೆಯಲು ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್ ಹಚ್ಚಿ ನೋಡಿ

18 Dec 2023

Author: Sushma Chakre

TV9 Kannada Logo For Webstory First Slide
ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಬಿಗಿಗೊಳಿಸಲು ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ಕಾಫಿ ಮತ್ತು ಜೇನುತುಪ್ಪವು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ ಮತ್ತು ಚರ್ಮವನ್ನು ಮೊದಲಿಗಿಂತ ಬಿಗಿಯಾಗಿಸುತ್ತದೆ.

ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಬಿಗಿಗೊಳಿಸಲು ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ಕಾಫಿ ಮತ್ತು ಜೇನುತುಪ್ಪವು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ ಮತ್ತು ಚರ್ಮವನ್ನು ಮೊದಲಿಗಿಂತ ಬಿಗಿಯಾಗಿಸುತ್ತದೆ.

ಕಾಫಿ ಮತ್ತು ಜೇನುತುಪ್ಪದ ಮಾಸ್ಕ್

coffee face mask 8

ಈ ಫೇಸ್ ಮಾಸ್ಕ್ ತಯಾರಿಸಲು 2 ಚಮಚ ಕಾಫಿ ಪುಡಿ, 2 ಚಮಚ ಜೇನುತುಪ್ಪ ಬೇಕಾಗುತ್ತದೆ.

ಬೇಕಾಗುವ ಪದಾರ್ಥಗಳು

coffee face mask 9

ಒಂದು ಬೌಲ್ ತೆಗೆದುಕೊಂಡು ಕಾಫಿ ಪುಡಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ.

ಫೇಸ್ ಮಾಸ್ಕ್ ತಯಾರಿಸುವ ವಿಧಾನ

ನಿಮ್ಮ ಮುಖದಿಂದ ಕೊಳಕು ಮತ್ತು ಮಾಲಿನ್ಯವನ್ನು ತೆಗೆದುಹಾಕಲು ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ. ನಿಮ್ಮ ಮುಖವನ್ನು ತೊಳೆದಾದ ನಂತರ ಸ್ವಚ್ಛವಾದ ಟವೆಲ್​ನಿಂದ ಒರೆಸಿ.

ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ

ನಿಮ್ಮ ಮುಖದ ಮೇಲೆ ಕಾಫಿ ಮಾಸ್ಕ್ ಅನ್ನು ಸಮವಾಗಿ ಹರಡಿ. ಯಾವ ಕಾರಣಕ್ಕೂ ಕಣ್ಣಿಗೆ ಈ ಫೇಸ್ ಮಾಸ್ಕ್ ತಾಗಿಸಬೇಡಿ.

ಫೇಸ್ ಮಾಸ್ಕ್ ಹಚ್ಚಿರಿ

ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ. ಇದರಿಂದ ಮಾಸ್ಕ್‌ನಲ್ಲಿರುವ ಅಂಶಗಳು ಚರ್ಮಕ್ಕೆ ಚೆನ್ನಾಗಿ ಹೀರಲ್ಪಡುತ್ತವೆ.

 ಮೃದುವಾಗಿ ಮಸಾಜ್ ಮಾಡಿ

ಈ ಫೇಸ್​ ಮಾಸ್ಕ್ ಅನ್ನು 10-15 ನಿಮಿಷಗಳ ಕಾಲ ಮುಖದಲ್ಲೇ ಒಣಗಲು ಬಿಡಿ.

ಒಣಗಲು ಬಿಡಿ

ಉಗುರುಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಮುಖ ತೊಳೆಯುವಾಗ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಮುಖದ ರಂಧ್ರಗಳು ಕ್ಲೀನ್ ಆಗುತ್ತವೆ.

ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ

ಮುಖ ಒಣಗಿದ ನಂತರ ಹೆಚ್ಚು ಕೆಮಿಕಲ್ ಅಂಶವಿಲ್ಲದ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ.

ಮಾಯಿಶ್ಚರೈಸರ್ ಹಚ್ಚಿ

ನಿಮ್ಮ ಚರ್ಮವನ್ನು ಆಳವಾಗಿ ಎಫ್ಫೋಲಿಯೇಟ್ ಮಾಡಲು ವಾರಕ್ಕೆ 2 ಬಾರಿ ಈ ಫೇಸ್ ಮಾಸ್ಕ್ ಬಳಸಿ.

ಒಮ್ಮೆ ಮಾಡಿದರೆ ಸಾಲದು

ಜೇನುತುಪ್ಪವು ಚರ್ಮವನ್ನು ಹೈಡ್ರೇಟ್ ಆಗಿ ಇರಿಸಿದರೆ, ಕಾಫಿ ಸತ್ತ ಚರ್ಮದ ಕೋಶಗಳನ್ನು ಎಫ್ಫೋಲಿಯೇಟ್ ಮಾಡಲು ಮತ್ತು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಕೆಫೀನ್ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುವುದರಿಂದ ಈ ಫೇಸ್ ಮಾಸ್ಕ್ ನಿಮ್ಮ ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.

ಪ್ರಯೋಜನಗಳೇನು?