ನೀವು ಸಣ್ಣ ಸಣ್ಣ ವಿಷ್ಯಕ್ಕೂ ಕೋಪ ಮಾಡ್ಕೋತೀರಾ? ಹಾಗಿದ್ರೆ ಅದರ ಹಿಂದಿನ ಕಾರಣವನ್ನು ತಿಳಿಯಿರಿ
20 Dec 2023
Author: Malashree Anchan
ಕೆಲವೊಮ್ಮೆ ನಾವು ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತೇವೆ. ಹೀಗೆ ಪದೇ ಪದೇ ಕೋಪಗೊಳ್ಳುವ ಹಿಂದೆ ವೈಜ್ಞಾನಿಕ ಕಾರಣವಿದೆಯಂತೆ, ಅದು ಏನೆಂದು ಗೊತ್ತಾ?
ನಾವು ಪದೇ ಪದೇ ಕೋಪಗೊಳ್ಳಲು ಈ ಒಂದು ಹಾರ್ಮೋನು ಕಾರಣವಂತೆ.
ತಜ್ಞರ ಪ್ರಕಾರ, ಜನರು ಸಿರೊಟೋನಿನ್ ಹಾರ್ಮೋನಿನ ಕಾರಣ ಹೆಚ್ಚಾಗಿ ಕೋಪಗೊಳ್ಳುತ್ತಾರೆ.
ಹೌದು ವಿಜ್ಞಾನದ ಪ್ರಕಾರ, ದೇಹದಲ್ಲಿ ಸಿರೊಟೋನಿನ್ ಹಾರ್ಮೋನಿನ ಕೊರತೆ ಉಂಟಾದಾಗ ನಾವು ಅತಿಯಾಗಿ ಕೋಪಗೊಳ್ಳಲು ಆರಂಭಿಸುತ್ತೇವೆ.
ಈ ಕೋಪವನ್ನು ನಿಯಂತ್ರಿಸದಿದ್ದರೆ ಅದು ನಮ್ಮ ಹೃದಯ ಮತ್ತು ಮನಸ್ಥಿತಿಯ ಮೇಲೆ ನಕರಾತ್ಮಕ ಪರಿಣಾವನ್ನು ಉಂಟುಮಾಡಬಹುದು.
ಹಾಗಿರುವಾಗ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಗಮನಹರಿಸಿದರೆ, ಸಿರೊಟೋನಿನ್ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಬಹುದು.
ಲ್ಲದೆ ಕೋಪವನ್ನು ನಿಯಂತ್ರಿಸಲು ಪ್ರತಿನಿತ್ಯ ಧ್ಯಾನ ಮಾಡಬಹುದು, ಡಾರ್ಕ್ ಚಾಕೊಲೇಟ್ ತಿನ್ನಬಹುದು ಮತ್ತು ಕಾಮಿಡಿ ಶೋಗಳನ್ನು ನೋಡಬಹುದು.
Next: ಇಲ್ಲಿದೆ ‘ಸಲಾರ್’ ಲೋಕದ ಬಗೆಗಿನ ಮಾಹಿತಿ