5 ವರ್ಷದೊಳಗಿನ ಮಕ್ಕಳಿಗೆ ನಟ್ಸ್ಗಳನ್ನು ನೀಡಬಾರದು. ಏಕೆಂದರೆ ಅವುಗಳನ್ನು ತಿಂದಾಗ ಗಂಟಲಿನಲ್ಲಿ ಸಿಕ್ಕಿಕೊಂಡರೆ ಉಸಿರುಗಟ್ಟಿಸಬಹುದು. ನಿಮ್ಮ ಮಗುವಿಗೆ ನಟ್ಸ್ ಮತ್ತು ಸೀಡ್ಸ್ ಕೊಡುವುದಾದರೆ ಅವುಗಳನ್ನು ಪುಡಿ ಮಾಡಿ ಕೊಡಿ.
ನಟ್ಸ್ ಮತ್ತು ಸೀಡ್ಸ್
4 ವರ್ಷದೊಳಗಿನ ಮಕ್ಕಳಿಗೆ ಪಾಪ್ ಕಾರ್ನ್ ನೀಡಬಾರದು. ಶಿಶುಗಳು ಮತ್ತು ಕಿರಿಯ ಮಕ್ಕಳಿಗೆ ಪಾಪ್‌ಕಾರ್ನ್ ಉಸಿರುಗಟ್ಟಿಸುವ ಅಪಾಯವಿದೆ. ಅದರ ಚೂಪಾದ ಅಂಚುಗಳು ಮತ್ತು ಕರ್ನಲ್ ಫ್ಲೇಕ್‌ಗಳು ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇದು ಗಂಟಲು ಕಟ್ಟುವಿಕೆ ಅಥವಾ ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ.
ಪಾಪ್ ಕಾರ್ನ್
ಗಟ್ಟಿಯಾದ ಕ್ಯಾಂಡಿ ಅಥವಾ ಸಣ್ಣ ಭಾಗಗಳನ್ನು ಹೊಂದಿರುವ ಯಾವುದೇ ಮಿಠಾಯಿ ಮಕ್ಕಳ ಉಸಿರುಗಟ್ಟಿಸುವ ಅಪಾಯವನ್ನು ಉಂಟುಮಾಡಬಹುದು. ಈ ಸಿಹಿತಿಂಡಿಗಳು ಸಕ್ಕರೆಯನ್ನು ಹೊಂದಿರುತ್ತವೆ. ಇದು ಹಲ್ಲು ಹುಳುಕಾಗಲು ಕಾರಣವಾಗಬಹುದು.
ಗಟ್ಟಿಯಾದ ಕ್ಯಾಂಡಿ
ಚಿಕ್ಕ ಮಕ್ಕಳು ಮತ್ತು ಅಂಬೆಗಾಲಿಡುವವರು ದ್ರಾಕ್ಷಿ ಹಣ್ಣನ್ನು ಇಡಿಯಾಗಿ ತಿಂದರೆ ಉಸಿರುಗಟ್ಟಿ ಸಾಯಬಹುದು. ಆಗ ಅವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ.
ದ್ರಾಕ್ಷಿ
ಮಕ್ಕಳಿಗೆ ಮೇಕೆಗಳ ಹಾಲಿನ ಚೀಸ್ ಮತ್ತು ರೋಕ್ಫೋರ್ಟ್ನಂತಹ ಮೃದುವಾದ ಚೀಸ್ ನೀಡಿದರೆ ಅದು ಲಿಸ್ಟೇರಿಯಾ ಎಂಬ ಬ್ಯಾಕ್ಟೀರಿಯಾವನ್ನು ಉಂಟುಮಾಡುವ ಅಪಾಯವಿದೆ.
ಚೀಸ್
ಹಸಿ ತರಕಾರಿಗಳು ಮತ್ತು ಹಣ್ಣುಗಳನ್ನು ಚಿಕ್ಕ ಮಕ್ಕಳಿಗೆ ಎಂದಿಗೂ ನೀಡಬೇಡಿ. ಮೊದಲು ಅವುಗಳನ್ನು ಚೆನ್ನಾಗಿ ಬೇಯಿಸಿ ನಂತರ ನೀಡುವುದು ಉತ್ತಮ. ಬೇಯಿಸಿದ ಬಳಿಕ ಸಣ್ಣದಾಗಿ ಕತ್ತರಿಸಿ ಅಥವಾ ಅವುಗಳನ್ನು ಪೇಸ್ಟ್ ರೀತಿ ಮಾಡಿ ಕೊಡುವುದರಿಂದ ಗಂಟಲಿಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಹಸಿ ತರಕಾರಿಗಳು
ಹಾಲಿನಂತಹ ಕಚ್ಚಾ ಡೈರಿ ಉತ್ಪನ್ನಗಳು ಮಕ್ಕಳಿಗೆ ಸುರಕ್ಷಿತವಲ್ಲ. ಏಕೆಂದರೆ ಅವುಗಳು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಲಿಸ್ಟೇರಿಯಾದಂತಹ ಇತರ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ. ಇದು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತದೆ.