ಬೇಸಿಗೆಗೆ ಉತ್ತಮವಾದ 6 ದಕ್ಷಿಣ ಭಾರತೀಯ ಬ್ರೇಕ್ಫಾಸ್ಟ್ಗಳಿವು
ಮಸಾಲೆ ದೋಸೆಯಿಂದ ಉದ್ದಿನ ವಡೆಯವರೆಗೆ ಬಾಯಲ್ಲಿ ನೀರೂರಿಸುವ ಮತ್ತು ಸುಲಭವಾಗಿ ತಯಾರಿಸಬಹುದಾದ ದಕ್ಷಿಣ ಭಾರತೀಯ ಉಪಹಾರಗಳ ಕುರಿತು ಮಾಹಿತಿ ಇಲ್ಲಿದೆ. ಇವುಗಳು ಬೇಸಿಗೆಗೆ ಹೇಳಿ ಮಾಡಿಸಿದ ಬ್ರೇಕ್ಫಾಸ್ಟ್.
ಬೇಸಿಗೆಯ ಉಪಾಹಾರ
Pic credit - iStock
ಇಡ್ಲಿ ಸಾಂಬಾರ್ ದಕ್ಷಿಣ ಭಾರತದ ಅತ್ಯಂತ ರುಚಿಕರವಾದ ಉಪಹಾರಗಳಲ್ಲಿ ಒಂದಾಗಿದೆ. ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಬೆಳಗಿನ ಉಪಾಹಾರಕ್ಕೆ ಪರಿಪೂರ್ಣವಾಗಿದೆ.
ಇಡ್ಲಿ- ಸಾಂಬಾರ್
Pic credit - iStock
ಮೆದು ವಡೆಯನ್ನು ಉದ್ದಿನಬೇಳೆಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ ನೀವು ಇದನ್ನು ನಿಮ್ಮ ಬೇಸಿಗೆಯ ಉಪಹಾರಕ್ಕೆ ಸೇರಿಸಬಹುದು.
ಉದ್ದಿನ ವಡೆ
Pic credit - iStock
ರವೆ, ಕತ್ತರಿಸಿದ ತರಕಾರಿಗಳು, ಸ್ವಲ್ಪ ತೆಂಗಿನತುರಿ, ಈರುಳ್ಳಿ ಮತ್ತು ನಿಮ್ಮ ರುಚಿಯ ಮಸಾಲೆಗಳೊಂದಿಗೆ ನೀವು ಮನೆಯಲ್ಲಿ ಉಪ್ಪಿಟ್ಟು ಮಾಡಬಹುದು.
ಉಪ್ಪಿಟ್ಟು
Pic credit - iStock
ಸಾಮಾನ್ಯವಾದ ಉದ್ದಿನಿಂದ ತಯಾರಿಸಿದ ದೋಸೆ ಹಿಟ್ಟಿನ ಬದಲಿಗೆ ರವಾ ದೋಸೆ ಹಿಟ್ಟಿನೊಂದಿಗೆ ನೀವು ರವಾ ದೋಸೆಯನ್ನು ತಯಾರಿಸಬಹುದು. ಇದು ಬೇಸಿಗೆಯಲ್ಲಿ ಲಘು ಉಪಹಾರದ ಆಯ್ಕೆಯೂ ಆಗಿದೆ.
ರವಾ ದೋಸೆ
Pic credit - iStock
ಉತ್ತಪಂ ಎಂಬುದು ದಕ್ಷಿಣ ಭಾರತದ ಸಾಂಪ್ರದಾಯಿಕ ಖಾದ್ಯವಾಗಿದ್ದು, ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ಇದನ್ನು ತಯಾರಿಸಲಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಇದು ಆರೋಗ್ಯಕರ ಆಯ್ಕೆಯಾಗಿದೆ.
ಉತ್ತಪಂ
Pic credit - iStock
ಬೇಸಿಗೆಯ ಉಪಹಾರಕ್ಕಾಗಿ ನೀವು ಮಸಾಲೆ ದೋಸೆಯನ್ನು ಮನೆಯಲ್ಲಿಯೇ ತಯಾರಿಸಬಹುದು. ಏಕೆಂದರೆ ಇದಕ್ಕೆ ಹೆಚ್ಚಿನ ಖರ್ಚಿಲ್ಲ ಮತ್ತು ಹೆಚ್ಚು ಕಷ್ಟವೂ ಇಲ್ಲ. ಇದನ್ನು ಸುಲಭವಾಗಿ ತಯಾರಿಸಬಹುದು.