ಹೂ ಬೆಳೆಗಾರರ ಮೊಗದಲ್ಲಿ ಕಾಂತಿ ತಂದ ಸಂಕ್ರಾಂತಿ

13 January 2025

Gangadhar Saboji

ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈ ಹಬಕ್ಕೆ ಹೂಗಳು ಬೇಕೆ ಬೇಕು. ಹಾಗಾಗಿ ವಿವಿಧ ಹೂಗಳಿಗೆ ಭಾರೀ ಬೇಡಿಕೆ ಬಂದಿದ್ದು, ರೈತರು ಸಂತಸಗೊಂಡಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೂ ಬೆಳೆಗೆ ಖ್ಯಾತಿಯಾಗಿದ್ದಾರೆ.

ಮೇರಾಬುಲ್ ರೋಜ್, ಸೇವಂತಿ, ಕನಕಾಂಬರ, ಚೆಂಡು, ಸುಗಂದರಾಜ ಸೇರಿದಂತೆ ವಿವಿಧ ಹೂಗಳನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.

ಸದ್ಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೂ ಗಳಿಗೆ ಭಾರೀ ಬೇಡಿಕೆ ಬಂದಿದೆ. 

ಕೆಜಿ ಸೇವಂತಿಗೆ 200 ರೂ, ಕೆಜಿ ರೋಜ್​ಗೆ 200 ರೂ, ಚೆಂಡು ಹೂಗೆ 50 ರೂ, ಕೆಜಿ ಮಲ್ಲಿಗೆಗೆ 500 ರೂ.

ಚಿಕ್ಕಬಳ್ಳಾಪುರದ ಹೂಗಳು ಕಲರ್, ಗುಣಮಟ್ಟ, ಶೈನಿಂಗ್ ಇರುತ್ತದೆ. ಹಾಗಾಗಿ ಈ ಭಾಗದಲ್ಲಿ ಬೆಳೆಯುವ ಹೂಗಳಿಗೆ ದೇಶದಾದ್ಯಂತ ಬೇಡಿಕೆಯಿದೆ.   

 ಬೆಳೆದ  ಹೂಗಳಿಗೆ ಬೆಲೆಯಿಲ್ಲ ಅಂತ್ತಿದ್ದ ರೈತರಿಗೆ ಸಂಕ್ರಾಂತಿ ಹಬ್ಬ ಆದಾಯ ತಂದುಕೊಟ್ಟಿದೆ. 

ಕೆಂಪು ಸುಂದರಿ ಮೆಣಸಿನಕಾಯಿ ಬೆಲೆಯಲ್ಲಿ ಗಣನೀಯ ಇಳಿಕೆ