ಈ ಬಸ್ಸು ನಿಲ್ದಾಣದಲ್ಲಿದೆ ಉಚಿತ ಗ್ರಂಥಾಲಯ

5 August 2024

Pic credit - pinterest

Sayinanda

ನೀವೇನಾದರೂ ಪುಸ್ತಕ ಪ್ರೇಮಿಯಾಗಿದ್ದು, ಓದುವ ಹವ್ಯಾಸವನ್ನು ಹೊಂದಿದ್ದರೆ ಈ ಬಸ್ ನಿಲ್ದಾಣಕ್ಕೊಮ್ಮೆ ಭೇಟಿ ನೀಡಬಹುದು.

Pic credit - pinterest

ಪುಸ್ತಕ ಪ್ರೇಮಿಗಳಿಗೆಂದೇ  ಈ ಬಸ್ ನಿಲ್ದಾಣದಲ್ಲಿ ಉಚಿತ ಗ್ರಂಥಾಲಯದ ವ್ಯವಸ್ಥೆಯಿದೆ.

Pic credit - pinterest

ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬಂಟಕಲ್ಲಿನ ಬಸ್ ನಿಲ್ದಾಣದಲ್ಲಿ ಉಚಿತ ಗ್ರಂಥಾಲಯವನ್ನು ಕಾಣಬಹುದು.

Pic credit - pinterest

ಬಸ್ಸಿಗಾಗಿ ಕಾಯುವ ಆ ಸಮಯದಲ್ಲಿ ಇಲ್ಲಿರುವ ಪುಸ್ತಕವನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

Pic credit - pinterest

ಓದಲು ಸಮಯವು ಸಾಕಾಗದ್ದಿದ್ದಲ್ಲಿ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಆದರೆ ಆ ಪುಸ್ತಕವನ್ನು ಮರಳಿ ಇಲ್ಲಿಯೇ ತಂದು  ಇಡಬೇಕು.

Pic credit - pinterest

ಮನೆಯಲ್ಲಿ ಹಳೆಯ ಪುಸ್ತಕಗಳು ಇದ್ದಲ್ಲಿ, ಅದನ್ನು ತಂದು ಈ ಲೈಬ್ರರಿಯಲ್ಲಿ ಇಡಬಹುದಾಗಿದ್ದು, ಇದರಿಂದ ಪುಸ್ತಕ ಭಂಡಾರವು ಹೆಚ್ಚಾಗುತ್ತದೆ.

Pic credit - pinterest

ಬಸ್ಸಿಗಾಗಿ ಕಾಯುವ ಸಮಯದಲ್ಲಿ ಮೊಬೈಲ್ ಬಳಕೆಯನ್ನು ನಿಲ್ಲಿಸಿ, ಪುಸ್ತಕದ ಒಲವು ಮೂಡಿಸಲು ಈ ಗ್ರಂಥಾಲಯವನ್ನು ನಿರ್ಮಿಸಲಾಗಿದೆ.

Pic credit - pinterest