ಗಾಜಿನ ಬಾಟಲಿಯಲ್ಲಿ ಗಿಡ ನೆಡುವಾಗ ಈ ವಿಷಯಗಳು ನೆನಪಿರಲಿ
12 November 2024
Pic credit - Pintrest
Sainanda
ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೂವಿನ ಗಿಡಗಳು ಸೇರಿದಂತೆ ಸಸ್ಯತೋಟ ಬೆಳೆಸಲು ಆಸೆ ಇರುತ್ತದೆ.
Pic credit - Pintrest
ಆದರೆ ಸ್ಥಳವಕಾಶವಿಲ್ಲ ಎನ್ನುವ ಕಾರಣಕ್ಕೆ ಮನೆಯ ಬಾಲ್ಕನಿ ಅಥವಾ ಟೇರಸ್ ನಲ್ಲಿ ಸಣ್ಣ ಗಾರ್ಡನ್ ಮಾಡುತ್ತಾರೆ.
Pic credit - Pintrest
ಅದರಲ್ಲಿಯೂ ಈಗಿನ ದಿನಗಳಲ್ಲೂ ಪ್ಲಾಸ್ಟಿಕ್ ಬಾಟಲಿ ಅಥವಾ ಗಾಜಿನ ಬಾಟಲಿಯಲ್ಲಿ ಸಸ್ಯಗಳನ್ನು ನೆಡುವುದನ್ನು ನೋಡಿರಬಹುದು.
Pic credit - Pintrest
ಗಾಜಿನ ಜಾರ್ ಅಥವಾ ಗಾಜಿನ ಬಾಟಲಿಯಲ್ಲಿ ಸಸ್ಯ ಬೆಳೆಸುವುದು ತುಂಬಾ ಸುಲಭ, ಆದರೆ ಈ ಕೆಲವು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು.
Pic credit - Pintrest
ಮನೆ ಮತ್ತು ಕಚೇರಿಯ ಅಂದವನ್ನು ಹೆಚ್ಚಿಸಲು ಗಾಜಿನ ಬಾಟಲಿಯಲ್ಲಿ ಗಿಡ ನೆಡುತ್ತಿದ್ದರೆ ಅಗಲವಾದ ಗಾಜಿನ ಜಾರ್ ಆಯ್ಕೆ ಮಾಡಿಕೊಳ್ಳಿ.
Pic credit - Pintrest
ಬಾಟಲಿಯಲ್ಲಿ ಗಿಡ ನೆಡುವಾಗ ಸ್ವಲ್ಪ ಮರಳನ್ನು ಮಣ್ಣಿನೊಂದಿಗೆ ಮಿಶ್ರಣ ಮಾಡಿ. ಸಣ್ಣ ಚಮಚದೊಂದಿಗೆ ಮಣ್ಣಿನಲ್ಲಿ ರಂಧ್ರವನ್ನು ಮಾಡಿ ಸಸ್ಯ ನೆಡಿ.
Pic credit - Pintrest
ಗಾಜಿನ ಬಾಟಲಿಯಲ್ಲಿ ರಂಧ್ರಗಳು ಇಲ್ಲದ ಕಾರಣ ಅಗತ್ಯಕ್ಕಿಂತ ಹೆಚ್ಚು ನೀರನ್ನು ಸಸ್ಯಗಳಿಗೆ ಹಾಕಬೇಡಿ. ನೀರು ಅಧಿಕವಾದರೆ ಗಿಡ ಕೊಳೆತು ಹೋಗುತ್ತದೆ.
Pic credit - Pintrest
ಅಲರ್ಜಿಗೆ ಪ್ರಮುಖ ಕಾರಣಗಳಿವು
ಇಲ್ಲಿ ಕ್ಲಿಕ್ ಮಾಡಿ