Author: Sushma Chakre

ದಟ್ಟವಾದ ಕೂದಲು ನಿಮ್ಮದಾಗಬೇಕಾ? ರೋಸ್ಮರಿ ಎಣ್ಣೆ ಹಚ್ಚಿ

22 Dec 2023

Author: Sushma Chakre

ರೋಸ್ಮರಿ ಎಣ್ಣೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ರೋಸ್ಮರಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ನೆತ್ತಿಯನ್ನು ಪೋಷಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಕೂದಲ ಉದುರುವಿಕೆ ನಿಯಂತ್ರಣ

ರೋಸ್ಮರಿ ಎಣ್ಣೆಯನ್ನು ಹಚ್ಚಿ ನೆತ್ತಿಗೆ ಮಸಾಜ್ ಮಾಡಬಹುದು, ಶಾಂಪೂಗೆ ಮಿಶ್ರಣ ಮಾಡುವ ಮೂಲಕ ಬಳಸಬಹುದು. ರೋಸ್ಮರಿ ಎಣ್ಣೆಯನ್ನು ಒಳಗೊಂಡಿರುವ ಕೂದಲಿನ ಉತ್ಪನ್ನಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಶಾಂಪೂಗೆ ಸೇರಿಸಬಹುದು

ರೋಸ್ಮರಿ ಎಣ್ಣೆಯು ರಕ್ತ ಸಂಚಲನವನ್ನು ಸುಧಾರಿಸುತ್ತದೆ. ಇದು ಆರೋಗ್ಯಕರ ಕೂದಲ ಬೆಳವಣಿಗೆಗೆ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಎಣ್ಣೆಯನ್ನು ಕನಿಷ್ಠ 4ರಿಂದ 6 ತಿಂಗಳು ನಿರಂತರವಾಗಿ ಬಳಸಿದರೆ ಕೂದಲು ಸದೃಢವಾಗುತ್ತದೆ.

ರಕ್ತ ಸಂಚಲನವನ್ನು ಸುಧಾರಿಸುತ್ತದೆ

ರೋಸ್ಮರಿ ಎಣ್ಣೆ ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ರೋಸ್ಮರಿ ಎಣ್ಣೆಯು ಪ್ರಬಲವಾದ ರೋಗನಿರೋಧಕ ಗುಣಗಳನ್ನು ಹೊಂದಿದೆ. ಇದು ನಿಮ್ಮ ತಲೆಹೊಟ್ಟು, ಅತಿಯಾದ ಎಣ್ಣೆ ಮತ್ತು ಕೂದಲು ಉದುರಲು ಅಥವಾ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ತಡೆಯುವ ಇತರ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ತಲೆಹೊಟ್ಟು ಕಡಿಮೆಯಾಗುತ್ತದೆ

ರೋಸ್ಮರಿ ಎಣ್ಣೆಯಲ್ಲಿರುವ ಅಂಶಗಳು ಕೂದಲಿನ ಬೇರುಗಳನ್ನು ಆ್ಯಕ್ಟಿವ್ ಮಾಡುತ್ತದೆ ಮತ್ತು ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ರೋಸ್ಮರಿ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಕೂದಲಿನ ಬೇರು ಸದೃಢವಾಗುತ್ತದೆ

ರೋಸ್ಮರಿ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ನೆತ್ತಿಯ ಮೇಲೆ ನೇರವಾಗಿ ರೋಸ್ಮರಿ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ನೆತ್ತಿಯ ಆರೋಗ್ಯ ಕಾಪಾಡುತ್ತದೆ

ತೆಂಗಿನ ಎಣ್ಣೆಯೊಂದಿಗೆ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕನಿಷ್ಠ 5 ರಿಂದ 10 ನಿಮಿಷಗಳ ನಂತರ ತಲೆಯನ್ನು ತೊಳೆಯಿರಿ.

ತಲೆಗೆ ಮಸಾಜ್ ಮಾಡಿ