metabolism

Author: Sushma Chakre

ಈ 8 ಕೆಟ್ಟ ಆಹಾರ ಪದ್ಧತಿ ನಿಮ್ಮ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಬಹುದು

21 Dec 2023

Author: Sushma Chakre

TV9 Kannada Logo For Webstory First Slide
fish

ದೇಹದ ಚಯಾಪಚಯವನ್ನು ಸುಧಾರಿಸಲು ಪ್ರೋಟೀನ್‌ಗಳು ಸಹಾಯ ಮಾಡುತ್ತವೆ. ನಿಮ್ಮ ಆಹಾರದಲ್ಲಿ ನೀವು ಸಾಕಷ್ಟು ಪ್ರೋಟೀನ್‌ಗಳನ್ನು ಹೊಂದಿಲ್ಲದಿದ್ದರೆ ಅದು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರಬಹುದು.

ಪ್ರೋಟೀನ್

eat

ಕ್ರ್ಯಾಶ್ ಆಹಾರಗಳು ತೂಕ ಇಳಿಸಲು ಸಹಾಯ ಮಾಡಬಹುದಾದರೂ ಇದು ಸಂಪೂರ್ಣವಾಗಿ ಆರೋಗ್ಯಕರವಲ್ಲ. ಇದು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ ಈ ಆಹಾರಗಳು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ.

ಕ್ರ್ಯಾಶ್ ಡಯಟ್ಸ್

processed food

ನೀವು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಸೇವಿಸಿದಾಗ ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಈ ಏರಿಳಿತಗಳು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ

ನಾರಿನಂಶವು ನಿಮ್ಮನ್ನು ಹೆಚ್ಚು ಕಾಲ ಪೂರ್ಣವಾಗಿ ಇರಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ನೀವು ಸಾಕಷ್ಟು ಫೈಬರ್ ಅನ್ನು ಸೇವಿಸದಿದ್ದರೆ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಫೈಬರ್

ರಾತ್ರಿಯಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುವುದು ಎಂದಿಗೂ ಒಳ್ಳೆಯದಲ್ಲ. ನಿಮ್ಮ ದೇಹವು ನೀವು ರಾತ್ರಿಯಲ್ಲಿ ಸೇವಿಸುವ ಆಹಾರವನ್ನು ಚಯಾಪಚಯಗೊಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ದೇಹದಲ್ಲಿ ಕೊಬ್ಬು ಶೇಖರವಾಗುತ್ತದೆ.

ಕ್ಯಾಲೋರಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬನ್ನು ಸೇರಿಸದಿರುವುದು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಈ ಕೊಬ್ಬುಗಳು ಹಾರ್ಮೋನ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ, ಇದರಿಂದಾಗಿ ಚಯಾಪಚಯ ಕ್ರಿಯೆಗೆ ಸಹಾಯವಾಗುತ್ತದೆ.

ಆರೋಗ್ಯಕರ ಕೊಬ್ಬುಗಳು

ನಿಮ್ಮ ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ನಿಮ್ಮ ದೇಹಕ್ಕೆ ನೀವು ಮಾಡಬಹುದಾದ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ. ನಿಮ್ಮ ಉಪಹಾರವು ನಿಮ್ಮ ಚಯಾಪಚಯ ಕ್ರಿಯೆಗೆ ಬಹಳ ಮುಖ್ಯ. ನೀವು ತಿಂಡಿಯನ್ನು ಸ್ಕಿಪ್ ಮಾಡಿದಾಗ ಅದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ.

ಉಪಹಾರ

ಆಲ್ಕೋಹಾಲ್ ಚಯಾಪಚಯವನ್ನು ಅಡ್ಡಿಪಡಿಸುತ್ತದೆ. ಇದು ಹೆಚ್ಚಿನ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯು ಚಯಾಪಚಯವನ್ನು ನಿಧಾನಗೊಳಿಸುತ್ತದೆ.

ಆಲ್ಕೋಹಾಲ್