sleep apnea 3

ಆರಾಮಾಗಿ ನಿದ್ರೆ ಮಾಡಲು ಇಲ್ಲಿವೆ 6 ಸಲಹೆಗಳು

28 Nov 2023

TV9 Kannada Logo For Webstory First Slide

Author: Sushma Chakre

sleep problem

ಆರೋಗ್ಯಕರ ನಿದ್ರೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಅತ್ಯಗತ್ಯ. ಪ್ರತಿದಿನ ಸಾಕಷ್ಟು ಪ್ರಮಾಣದ ನಿದ್ರೆ ಪಡೆಯುವುದು ಒತ್ತಡವನ್ನು ಕಡಿಮೆ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶಕ್ತಿಯನ್ನು ಪುನಃಸ್ಥಾಪಿಸುತ್ತದೆ.

ನಿದ್ರೆಯ ನೈರ್ಮಲ್ಯ

sleep problem 3

ಆರೋಗ್ಯಕರ ನಿದ್ರೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ಈ ಸಲಹೆಗಳನ್ನು ಫಾಲೋ ಮಾಡಿ

sleep problem 2

ಪ್ರತಿದಿನ ಎಷ್ಟು ನಿದ್ರೆ ಮಾಡುತ್ತೀರಿ ಎಂದು ಲೆಕ್ಕಾಚಾರ ಮಾಡಲು ವೇಳಾಪಟ್ಟಿಯು ತುಂಬಾ ಸಹಾಯಕವಾಗಿರುತ್ತದೆ. ನಿಮ್ಮ 24 ಗಂಟೆಗಳ ವೇಳಾಪಟ್ಟಿಯಲ್ಲಿ ಸುಮಾರು 6 ರಿಂದ 7 ಗಂಟೆಗಳ ನಿದ್ರೆಯನ್ನು ಮಾಡಲು ಮರೆಯಬೇಡಿ.

ವೇಳಾಪಟ್ಟಿ ಹಾಕಿಕೊಳ್ಳಿ

ನಿಮ್ಮ ನಿದ್ರೆಯ ವೇಳಾಪಟ್ಟಿಗೆ ಅಂಟಿಕೊಳ್ಳುವುದು ಅತ್ಯಗತ್ಯ. ಸ್ಥಿರವಾದ ನಿದ್ರೆಯ ದಿನಚರಿಯನ್ನು ರೂಪಿಸಲು ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಲು ಮತ್ತು ಪ್ರತಿದಿನ ಅದೇ ಸಮಯದಲ್ಲಿ ಏಳುವುದನ್ನು ಖಚಿತಪಡಿಸಿಕೊಳ್ಳಿ.

ನಿದ್ರೆ ಸ್ಥಿರವಾಗಿರಲಿ

ನಿಮ್ಮ ಮಲಗುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದನ್ನು, ಟಿವಿ ನೋಡುವುದನ್ನು ಅಥವಾ ಸಂಗೀತವನ್ನು ಕೇಳುವುದನ್ನು ತಪ್ಪಿಸಿ. ಅದು ನಿಮ್ಮ ನಿದ್ರೆಯ ಸಮಯವನ್ನು ವಿಳಂಬಗೊಳಿಸಬಹುದು.

ಎಲೆಕ್ಟ್ರಾನಿಕ್ಸ್ ಬಳಸಬೇಡಿ

ಮಲಗುವ ಮುನ್ನ ಭಾರೀ ಊಟ ಮತ್ತು ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ. ನಿಮ್ಮ ಮಲಗುವ ಸಮಯಕ್ಕೆ 2 ರಿಂದ 3 ಗಂಟೆಗಳ ಮೊದಲು ರಾತ್ರಿಯ ಊಟವನ್ನು ಮಾಡಿ. ಸಂಜೆಯ ಬಳಿಕ ಕಾಫಿ, ಟೀ ಸೇವಿಸಬೇಡಿ.

ಭಾರೀ ಊಟ ಮಾಡಬೇಡಿ

ಒತ್ತಡ ಮತ್ತು ಅತಿಯಾದ ಚಿಂತೆಯು ನಿದ್ರಾಹೀನತೆಗೆ ಕೆಲವು ಪ್ರಮುಖ ಕಾರಣಗಳಾಗಿವೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಮಲಗುವ ಸಮಯದ ಮೊದಲು ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿ.

ಧ್ಯಾನವನ್ನು ಅಭ್ಯಾಸ ಮಾಡಿ